'ಈ ದೇಶದ ಪ್ರಧಾನಿಯವರಿಗೆ ಸ್ಟೇಟ್ಸ್‌ಮನ್ ಶಿಪ್ ಇದ್ದಿದ್ರೆ ಇಂತಹ ಘಟನೆ ನಡೆಯುತ್ತಿರಲಿಲ್ಲ'

Jan 26, 2021, 6:00 PM IST

ಬೆಂಗಳೂರು (ಜ. 26): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರದ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಕೆಂಪುಕೋಟೆ ಮೇಲೆ ಸಿಖ್ ಬಾವುಟವನ್ನು ಹಾರಿಸಿದ್ದಾರೆ. ಈ ಹೋರಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 

'ಕೆಂಪುಕೋಟೆಯಲ್ಲಿ ಸಿಖ್ ಧ್ವಜ, ಪ್ರತಿಭಟನೆ ಹಿಂದೆ ದೇಶ ವಿರೋಧಿಗಳ ಷಡ್ಯಂತ್ರವಿದೆ'

ಈ ದೇಶದ ಪ್ರಧಾನಿಯಾದವರಿಗೆ ಸ್ಟೇಟ್ಸ್‌ಮನ್ ಶಿಪ್ ಇದ್ದಿದ್ರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯವರು ರೈತರ ಸಮಸ್ಯೆಗಳನ್ನು ಪರಿಹಾರ ಮಾಡದೇ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೃಷಿ ಕಾಯ್ದೆಯನ್ನು ತಡೆ ಹಿಡಿಯಲು ಹೇಳಿದರೂ, ಕೇಂದ್ರ ಅದನ್ನು ಪರಿಗಣಿಸಲೇ ಇಲ್ಲ' ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಹರಿಹಾಯ್ದಿದ್ದಾರೆ.