ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅಂತಿಮ ದರ್ಶನಕ್ಕೆ ಮನೆಯಲ್ಲಿ ಸಿದ್ಧತೆ ಮುಂದುವರೆದಿದೆ. ಮನೆಗೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.
ಬೆಂಗಳೂರು (ಡಿ. 10): ಹೆಲಿಕಾಪ್ಟರ್ ದುರಂತದಲ್ಲಿ (Helicaptor Crash) ಮಡಿದ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ (Gen Bipin Rawat) ಹಾಗೂ ಅವರ ಪತ್ನಿ ಮಧುಲಿಕಾ ಅಂತಿಮ ದರ್ಶನಕ್ಕೆ ಮನೆಯಲ್ಲಿ ಸಿದ್ಧತೆ ಮುಂದುವರೆದಿದೆ. ಮನೆಗೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾವತ್ ಮತ್ತು ಪತ್ನಿ ಮಧುಲಿಕಾ (Madhulika) ಅವರ ಪಾರ್ಥೀವ ಶರೀರವನ್ನು ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ. ಬೆಳಗ್ಗೆ 11.30ರಿಂದ 12.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂರೂ ಪಡೆಗಳ ಮಿಲಿಟರಿ ಬ್ಯಾಂಡ್‌ನೊಂದಿಗೆ ಮೆರವಣಿಗೆ ನಡೆಸಿ, 4 ಗಂಟೆಗೆ ಧೌಲಾ ಕುವಾನ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.