ಉತ್ತರಾಖಂಡದಲ್ಲಿ ಬಿಜೆಪಿ, ಕಾಂಗ್ರೆಸ್ಸನ್ನು ಮಣ್ಣು ಮುಕ್ಕಿಸಿದೆ ಹಾಗೂ ಸತತ 2ನೇ ಬಾರಿ ಅಧಿಕಾರಕ್ಕೆ ಬಂದಿದೆ. ಉತ್ತರಾಖಂಡ ಇತಿಹಾಸದಲ್ಲೇ ಒಂದು ಪಕ್ಷ ಪುನರಾಯ್ಕೆಯಾಗಿದ್ದು ಇದೇ ಮೊದಲು. ಈ ಗೆಲುವಿನ ಹಿಂದೆ ಚುನಾವಣಾ ಉಸ್ತುವಾರಿ ಸಚಿವ ಪ್ರಹ್ಲಾದ ಜೋಶಿಯವರ ಶ್ರಮವಿದೆ.

ಚುನಾವಣಾ ಪೂರ್ವದಲ್ಲಿ ಆಂತರಿಕ ಮನಸ್ತಾಪ, ಬಂಡಾಯ ನಾಯಕರ ಓಲೈಕೆ, ಚಾರ್‌ಧಾಮ್ ಯಾತ್ರೆಗೆ ಒತ್ತು, ಮೋದಿಯ ಅಭಿವೃದ್ಧಿ ಕೆಲಸಗಳನ್ನು ಮನೆ ಮನೆಗೆ ತಲುಪಿಸಿದ್ದು ಗೆಲುವಿಗೆ ಪ್ಲಸ್ ಪಾಯಿಂಟ್ ಆಯಿತು. ಇನ್ನು ಸಂಘಟನಾತ್ಮಕ ದೃಷ್ಟಿಯಿಂದ ನೋಡಿದರೆ, ಉತ್ತರಾಖಂಡದಾದ್ಯಂತ ಗರಿಷ್ಠ 100 ಜನರ ಸುಮಾರು 1.10 ಲಕ್ಷ ಸಣ್ಣ ಸಭೆ ಮಾಡಲು ಯೋಜನೆ ರೂಪಿಸಲಾಗಿತ್ತು ಆದರೆ, ಹವಾಮಾನ ಏರುಪೇರುಗಳಿಂದ ಕೇವಲ 80 ಸಾವಿರ ಸಭೆಗಳನ್ನು ಮಾತ್ರ ಮಾಡಲಾಯಿತು. ಕಳೆದ ಐದು ವರ್ಷಗಳಲ್ಲಿ ಮೂರು ಜನ ಮುಖ್ಯಮಂತ್ರಿಗಳು ಬದಲಾವಣೆಯಾದರೂ ಏನೆಲ್ಲಾ ಕೆಲಸಗಳನ್ನು ಮಾಡಲಾಗಿದೆ ಎಂಬುದನ್ನು ಈ ಸಭೆಗಳಲ್ಲಿ ಜನರಿಗೆ ತಿಳಿಸಲಾಯಿತು. ಇದು ಗೆಲುವಿಗೆ ಕಾರಣವಾಯಿತು.