Aug 11, 2022, 12:15 PM IST
ಪೊಲೀಸರು ಕಳ್ಳರನ್ನು ದರೋಡೆಕೋರರನ್ನು ಬೆನ್ನಟ್ಟಿ ಹಿಡಿಯುವುದನ್ನು ಸಿನಿಮಾಗಳಲ್ಲಿ ನೋಡಿರುತ್ತೀರಿ. ಆದರೆ ವಾಸ್ತವಾಗಿ ಅಂತಹ ದೃಶ್ಯಗಳು ನೋಡಲು ಸಿಗುವುದು ಬಲು ಅಪರೂಪ. ಆದಾಗ್ಯೂ ಈಗ ಪೊಲೀಸರು ಡ್ರಗ್ ಪೆಡ್ಲರ್‌ಗಳನ್ನು ಚೇಸ್ ಮಾಡಿ ಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ಸಿಂಗಂ ಸ್ಟೈಲ್‌ನಲ್ಲಿ ಡ್ರಗ್ ಪೆಡ್ಲರ್‌ಗಳನ್ನು ಬೇಟೆ ಆಡಿದ್ದಾರೆ. ಈ ದೃಶ್ಯ ನೋಡಿದರೆ ಸಿನಿಮಾ ಸೀನ್ ತರ ಕಾಣಿಸುತ್ತಿದೆ. ಆದರೆ ಇದು ನಿಜವಾಗಿಯೂ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ ರೀತಿ. ಪಂಜಾಬ್‌ನ ಫಿರೋಜ್‌ಪುರ ಪೊಲೀಸರು ಈ ಸಾಹಸ ಕಾರ್ಯ ಮಾಡಿದ್ದಾರೆ. ಪೊಲೀಸರು ಚೇಸ್ ಮಾಡುತ್ತಿರುವುದನ್ನು ಗಮನಿಸಿದ ದಂಧೆಕೋರರು ತಪ್ಪಿಸಿಕೊಳ್ಳಲು ನಾನಾ ತಂತ್ರಗಳನ್ನು ಮಾಡಿದ್ದಾರೆ. ಆದರೂ ಛಲ ಬಿಡದ ಪೊಲೀಸರು ಜೀವ ಪಣಕ್ಕಿಟ್ಟು ಈ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚೇಸಿಂಗ್ ವೇಳೆ ಪೆಡ್ಲರ್‌ಗಳ ಕಾರು ತಾಗಿ ಮಹಿಳೆಯೊಬ್ಬಳು ಸ್ಕೂಟಿಯಿಂದ ಬೀಳುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊನೆಗೂ ಡ್ರಗ್ ಪೆಡ್ಲರ್‌ಗಳ ಕಾರಿನ ಟಯರ್‌ಗೆ ಗುಂಡಿಕ್ಕುವ ಮೂಲಕ ಡ್ರಗ್ ಪೆಡ್ಲರ್‌ಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.