Noida Airport:ಜೆವರ್‌ನಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ, ಜನಸ್ತೋಮಕ್ಕೆ ಗಣ್ಯರು ಮೂಕವಿಸ್ಮಿತ!

Nov 25, 2021, 4:56 PM IST

ನೋಯ್ಡಾ(ನ.25): ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಗೌತಮಬುದ್ಧನಗರದ ಜೇವರ್‌ನಲ್ಲಿರುವ ನೋಯ್ಡಾ ವಿಮಾ ನಿಲ್ದಾಣ ಶಂಕುಸ್ಥಾಪನೆಗೆ ಆಗಮಿಸಿದ ಮೋದಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಕಿಕ್ಕಿರಿದು ತುಂಬಿದ್ದ ಜನಸ್ತೋಮ, ಮೋದಿ ಮೋದಿ ಘೋಷಣೆ ಕೋಗಿದ್ದಾರೆ. ಜನರತ್ತ ಕೈಬೀಸಿದ ಮೋದಿ, ಏಷ್ಯಾದ ಅತೀ ದೊಡ್ಡ ವಿಮಾನ ನಿಲ್ದಾಣ ಅನ್ನೋ ಹೆಗ್ಗಳಿಗೆ ನೋಯ್ಡಾ ವಿಮಾ ನಿಲ್ದಾಣ ಪಾತ್ರವಾಗಲಿದೆ.

5 ಸಾವಿಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತಲೆ ಎತ್ತಲಿರುವ ಈ ವಿಮಾನ ನಿಲ್ದಾಣ ಅತ್ಯಾಧುನಿಕ ಸೌಕರ್ಯ ಹೊಂದಿದ ನಿಲ್ದಾಣವಾಗಿದೆ. ವಿಮಾನ ನಿಲ್ದಾಣ ಜೊತೆಗೆ ವಿಮಾನ ರಿಪೇರಿ ಹಾಗೂ ನಿರ್ವಹಣಾ ಘಟಕವೂ ತಲೆ ಎತ್ತಲಿದೆ. ಇದರಿಂದ ದೇಶದ ಎಲ್ಲ ವಿಮಾನಗಳ ರಿಪೇರಿಗೆ ಇಲ್ಲೇ ಆಗಲಿದೆ. ವಿದೇಶಗಳ ಅವಲಂಬನೆ ಅಂತ್ಯಗೊಳ್ಳಲಿದೆ. 

ಮೊದಲ ಹಂತದ ಕಾಮಾಕಾರಿಗೆ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ವ್ಯಯಿಸುತ್ತಿದೆ. 2024ರಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ.