ಪ್ರಧಾನಿ ಮೋದಿಗೆ 72 ವರ್ಷಗಳು ಆಗಿದ್ದರೂ ಈಗಲೂ ಸಹ ಅವರು ಶಿಸ್ತುಬದ್ಧ ಜೀವನಶೈಲಿಗೆ ಹೆಸರಾಗಿದ್ದಾರೆ. ಅವರು ನಿದ್ದೆಯನ್ನು ಬಿಟ್ಟರೆ ಉಳಿದ ಎಲ್ಲ ಸಮಯದಲ್ಲೂ ಕ್ರಿಯಾಶೀಲರಾಗಿರುತ್ತಾರೆ. ಈ ಕುರಿತ ವಿವರ ಇಲ್ಲಿದೆ..
ಪ್ರಧಾನಿ ನರೇಂದ್ರ ಮೋದಿಗೆ 72 ವರ್ಷಗಳು ಆಗಿದ್ದು, ಈಗಲೂ ಸಹ ಶಿಸ್ತುಬದ್ಧ ಜೀವನಶೈಲಿ ನಡೆಸುತ್ತಿದ್ದಾರೆ. ದಿನಕ್ಕೆ 4 - 5 ಗಂಟೆ ನಿದ್ದೆ ಮಾಡುವುದನ್ನು ಬಿಟ್ಟರೆ, ಮಿಕ್ಕ ಎಲ್ಲ ಸಮಯದಲ್ಲೂ ಹೆಚ್ಚು ಬ್ಯುಸಿಯಾಗಿರ್ತಾರೆ. ಈ ಬಾರಿ ವಿಶ್ವ ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಮೈಸೂರಿಗೆ ಬಂದಿದ್ದ ವೇಳೆ ಸಿದ್ದೇಶ್ವರ ಶ್ರೀಗಳು ಮೋದಿಯನ್ನು ಕುರಿತು, ಅವರನ್ನು ನೋಡೋದೇ ಒಂದು ಸೌಭಾಗ್ಯದ ಕ್ಷಣ. ಅವರಿಲ್ಲಿ ಬರುತ್ತಾರೆ ಎಂದರೆ ನಿಮಗೆಷ್ಟು ಸಂತೋಷವಾಗಿರಬಹುದು. ಅಂತಹ ಪ್ರಧಾನ ಮಂತ್ರಿಗಳು ದೇಶಕ್ಕೆ ದೊರೆತಿದ್ದು ಸುದೈವ ಎಂದು ಹೇಳಿದ್ದರು. ಅಲ್ಲದೆ, ದಿನದ ಎಲ್ಲ ಸಮಯವನ್ನೂ ಜನರ ಚಿಂತನೆಗಾಗಿ, ದೇಶದ ಅಭಿವೃದ್ಧಿಗಾಗಿ ಅವರು ಮೀಸಲಿಟ್ಟಿದ್ದಾರೆ ಎಂದು ಹೇಳಿದ್ದರು.