ಭಾರತ-ಪಾಕ್ ಗಡಿಯಲ್ಲಿ ಮೋದಿ ದೀಪಾವಳಿ ಪಟಾಕಿ! ಚೀನಾ-ಪಾಕ್‌ಗೆ ಪ್ರಧಾನಿ ಕೊಟ್ಟ ಸಂದೇಶವೇನು?

Nov 3, 2024, 10:27 AM IST

ಭಾರತ-ಪಾಕ್ ಗಡಿಯಲ್ಲಿ ಮೋದಿ ದೀಪಾವಳಿ ಪಟಾಕಿ..! ಸೈನಿಕರ ಜೊತೆ ಬೆಳಕಿನ ಹಬ್ಬ.. ಮೋದಿ ಸಂಭ್ರಮ..! ಚೀನಾ-ಪಾಕ್ಗೆ ಮೋದಿ ಕೊಟ್ಟ ಸಂದೇಶವೇನು..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಸೈನಿಕರ ಜೊತೆ ಮೋದಿ ದೀಪಾವಳಿ. ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾದ ನಂತರ ಪ್ರತಿ ವರ್ಷದ ದೀಪಾವಳಿಯನ್ನು ಸೈನಿಕರ ಜೊತೆ ಸೆಲೆಬ್ರೆಟ್ ಮಾಡ್ತಾ ಬಂದಿದ್ದಾರೆ. ಪ್ರತಿ ವರ್ಷ ಒಂದೊಂದು ಗಡಿ ಭಾಗದಲ್ಲಿ ಮೋದಿ ದೀಪಾವಳಿ ಆಚರಿಸಿಕೊಳ್ಳುತ್ತಾರೆ. ಈ ವರ್ಷದ ದೀಪಾವಳಿಯನ್ನು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ್ ಗಡಿ ಭಾಗದಲ್ಲಿ ಆಚರಿಸಿದ್ದಾರೆ. 

ಗುಜರಾನ್ನ ಕಚ್ನಲ್ಲಿರುವ ಭಾರತ-ಪಾಕಿಸ್ತಾನದ ಗಡಿಯಲ್ಲಿ ಪಹರೆ ಕಾಯುವ ಸೈನಿಕರೊಂದಿಗೆ ಮೋದಿ ದೀಪಾವಳಿ ಆಚರಿಸಿದ್ದಾರೆ. ಭಾರತ-ಪಾಕ್ ಗಡಿಭಾಗದಲ್ಲಿ ಗಡಿ ಕಾಯೋ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಕೆಲವೊಂದಿಷ್ಟು ಖಡಕ್ ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ. ಪಾಕ್ಗೆ ಮೋದಿ ಕೊಟ್ಟ ಎಚ್ಚರಿಗಳೇನು? ಸೈನಿಕರಿಗೆ ಹೇಳಿದ ಕಿವಿಮಾತುಗಳೇನು. 140 ಕೋಟಿ ಭಾರತೀಯರು ಭಾರತ ಸೇನೆ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮಗೀಗ ಶತ್ರುಗಳ ತಾಕತ್ತಿನ ಚಿಂತೆ ಇಲ್ಲವೇ ಇಲ್ಲ. ಯಾಕೆಂದ್ರೆ ಸಧ್ಯದ ಭಾರತೀಯ ಸೇನೆಯ ಶಕ್ತಿ ನಮಗೆ ಗೊತ್ತಿದೆ ಎಂದು ಹೇಳಿದ ಮೋದಿ, ಪಾಕ್ ಮತ್ತು ಚೀನಾಗಳಿಗೆ ನೇರವಾಗಿನೇ ಕೆಲವೊಂದಿಷ್ಟು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಆಗಾಗ ಭಾರತವನ್ನು ಕೆಣಕುವ ಪ್ರಯತ್ನ ಮಾಡುವ ದೇಶಗಳಿಗೆ ಈ ಸರಿ ಖಡಕ್ಕಾಗಿನೇ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಈ 10 ವರ್ಷಗಳಲ್ಲಿ ಎಲ್ಲೆಲ್ಲಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ಕಾಯುವ ಸೈನಿಕರೊಂದಿಗೆ ದೀಪಾವಳಿ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಹಾಗಿದ್ರೆ 2014ರಿಂದ 2024ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲೆಲ್ಲಿ ದೀಪಾವಳಿ ಆಚರಿಸಿಕೊಂಡು ಬಂದಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಒಟ್ಟು ಹತ್ತು ಕಡೆಗಳಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸುತ್ತಾ ಬಂದಿದ್ದಾರೆ.