ಗುಜರಾತ್‌ನ ಪಂಜಮಹಲ್ ಜಿಲ್ಲೆಯಲ್ಲಿರುವ ಮಹಾಕಾಳಿ ದೇವಾಲಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಾಂಪ್ರಾದಾಯಿಕ ಧರ್ಮಧ್ವಜ ಹಾರಿಸಿದ್ದಾರೆ. ಈ ಮಂದಿರದ ಮೇಲೆ ನಿರ್ಮಾಣವಾಗಿದ್ದ ದರ್ಗಾವನ್ನು ಸಹಮತದೊಂದಿಗೆ ಸ್ಥಳಾಂತರಗೊಳಿಸಿ, ಮಂದಿರವನ್ನು ಮರುನಿರ್ಮಾಣ ಮಾಡಿ ಧ್ವಜ ಹಾರಿಸಲಾಗಿದೆ.

‘ದೇಗುಲದ ಮೇಲೆ ಹಾರಿಸಿದ ಧ್ವಜ ಧಾರ್ಮಿಕತೆಯ ಸಂಕೇತವಾಗಿದೆ. ಅಲ್ಲದೇ ನಮ್ಮ ನಂಬಿಕೆ ಎಷ್ಟೇ ವರ್ಷಗಳೂ ಕಳೆದರೂ ಸಹ ಅಚಲವಾಗಿರುತ್ತದೆ ಎಂಬುದನ್ನು ತೋರಿಸುತ್ತದೆ. ಭಾರತದ ಧಾರ್ಮಿಕ ಹೊಳಪು ಎಷ್ಟೇ ವರ್ಷ ಕಳೆದರೂ ಮರು ನಿರ್ಮಾನವಾಗುತ್ತಲೇ ಇರುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಮಂದಿರದ ಗೋಪುರವನ್ನು ಸುಲ್ತಾನ್ ಮಹಮ್ಮುದ್ ಬೇಗ್ಡಾ ಸುಮಾರು 500 ವರ್ಷಗಳ ಹಿಂದೆ ನಾಶಗೊಳಿಸಿದ್ದ. ಅದರ ಮೇಲೆ ದರ್ಗಾವನ್ನು ನಿರ್ಮಾಣ ಮಾಡಲಾಗಿತ್ತು. ಮುಸ್ಲಿಂ ಸಮುದಾಯದೊಡನೆ ಸಹಮತ ಸಾಧಿಸಿ ಇಲ್ಲಿದ್ದ ದರ್ಗಾವನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿ, ದೇಗಲವನ್ನು ಮರು ನಿರ್ಮಾಣ ಮಾಡಲಾಗಿದೆ.