ರಾಷ್ಟ್ರ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶ ಇಂದು ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ 8 ನೇ ಬಾರಿ ಕೆಂಪುಕೋಟೆಯಲ್ಲಿಂದು ಧ್ವಜಾರೋಹಣ ಮಾಡಿದ್ದಾರೆ.
ನವದೆಹಲಿ (ಆ. 15): ರಾಷ್ಟ್ರ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶ ಇಂದು ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ 8 ನೇ ಬಾರಿ ಕೆಂಪುಕೋಟೆಯಲ್ಲಿಂದು ಧ್ವಜಾರೋಹಣ ಮಾಡಿದ್ದಾರೆ. ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
'ಸ್ವತಂತ್ರಕ್ಕಾಗಿ ಮಡಿದ ಎಲ್ಲಾ ಮಹನೀಯರು, ನಮ್ಮ ವೀರ ಸೈನಿಕರನ್ನು ದೇಶ ಸ್ಮರಿಸಿಕೊಳ್ಳುತ್ತದೆ. ಭಾರತವನ್ನು ಪ್ರೀತಿಸುವ ಎಲ್ಲರಿಗೂ ಪ್ರಜಾಪ್ರಭುತ್ವವನ್ನು ಪ್ರೀತಿಸುವ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಭಾಷಣ ಆರಂಭಿಸಿದರು.