PM Security Breach: ಫ್ಲೈಓವರ್‌ನಲ್ಲಿ 20 ನಿಮಿಷ ಕಳೆದ ಮೋದಿ, ಪಂಜಾಬ್ ಸರ್ಕಾರದ ಪ್ರೀಪ್ಲ್ಯಾನ್.?

Jan 8, 2022, 5:01 PM IST

ನವದೆಹಲಿ (ಜ. 08): ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪಂಜಾಬ್‌ಗೆ (Punjab) ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರನ್ನು ರೈತರ ತಂಡವೊಂದು ಫ್ಲೈಓವರ್‌ವೊಂದರ ಮೇಲೆ ತಡೆಗಟ್ಟಿದ ಆತಂಕಕಾರಿ ಘಟನೆ ಬೇರೆ ಬೇರೆ ಆಯಾಮ ಪಡೆದುಕೊಂಡು, ಚರ್ಚೆಯಾಗುತ್ತಿದೆ. ಅತ್ಯಂತ ಬಿಗಿಭದ್ರತೆ ವ್ಯವಸ್ಥೆ ಹೊಂದಿರುವ ಪ್ರಧಾನಿ, ಫ್ಲೈಓವರ್‌ (Flyover) ಮೇಲೇ 20 ನಿಮಿಷಗಳನ್ನು ಅತಂತ್ರರಾಗಿ ಕಳೆದಿದ್ದಾರೆ. ಇದು ಪ್ರಧಾನಿಯಂತಹ ಅತಿಗಣ್ಯರ ವಿಷಯದಲ್ಲಿ ಕಂಡು ಕೇಳರಿಯದ ಭದ್ರತಾ ಲೋಪ ಎನ್ನಿಸಿಕೊಂಡಿದೆ.

Modi Security Breach: ಫ್ಲೈಓವರ್ ಮೇಲೆ 200 ನಿಮಿಷ ಅತಂತ್ರರಾಗಿ ಕಳೆದ ಮೋದಿ, Exclusive ವೈರಲ್!

 ಪಂಜಾಬ್‌ನಲ್ಲಿ ಪ್ರಧಾನಿ ಭೇಟಿ ವೇಳೆ ಉಂಟಾದ ಭದ್ರತಾ ಲೋಪದ ಬಗ್ಗೆ ವಿಚಾರಣೆ ಆರಂಭಿಸಿರುವ ಸುಪ್ರೀಂಕೋರ್ಟ್‌ (Supreme Court) ಪ್ರಧಾನಿಯ ಪ್ರಯಾಣದ ದಾಖಲೆಗಳನ್ನು ತಕ್ಷಣ ವಶಪಡಿಸಿಕೊಂಡು ಸುರಕ್ಷಿತವಾಗಿರಿಸುವಂತೆ ಪಂಜಾಬ್‌ ಹೈಕೋರ್ಟ್‌ನ (Punjab High Court) ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶನ ನೀಡಿದೆ. ಅಲ್ಲದೆ ಕೇಂದ್ರ ಹಾಗೂ ರಾಜ್ಯದ ತನಿಖೆ ಸ್ಥಗಿತಕ್ಕೂ ಸೂಚಿಸಿದೆ.

ಫ್ಲೈಓವರ್‌ ಮೇಲೆ ಪ್ರಧಾನಿ ನರೇಂದ್ರ ಮೋದಿ ಅತಂತ್ರರಾಗಿ ಸಿಲುಕಿದ್ದಾಗ ಪಂಜಾಬ್‌ ಪೊಲೀಸರು ಏನೂ ಮಾಡದೆ ಸುಮ್ಮನಿದ್ದ ವಿಡಿಯೋ ವೈರಲ್‌ ಆಗಿದೆ. ಭದ್ರತಾ ಲೋಪ ಉಂಟಾದ ವೇಳೆ ಪ್ರಧಾನಿಯನ್ನು ಸುರಕ್ಷಿತವಾಗಿರಿಸಲು ಎಸ್‌ಪಿಜಿ ತಂಡದವರು ಆತಂಕದಿಂದ ಯತ್ನಿಸುತ್ತಿರುವುದು ಹಾಗೂ ಪೊಲೀಸರು ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಜೊತೆಗೆ ಫ್ಲೈಓವರ್ ಮೇಲೆ ಪ್ರಧಾನಿ ಮೊದಿ ಕಳೆದ 20 ನಿಮಿಷ ಹೇಗಿತ್ತು..? ಎಕ್ಸ್‌ಕ್ಲೂಸಿವ್ ವಿಡಿಯೋ