ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಹಿರಿಮೆ ಹೊಂದಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ 9.02 ಕಿ.ಮೀ. ಉದ್ದದ ಮನಾಲಿ- ಲೇಹ್ ನಡುವಣ ರಸ್ತೆ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆ ಮಾಡಿದ್ದಾರೆ.
ನವದೆಹಲಿ (ಅ. 03): ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಹಿರಿಮೆ ಹೊಂದಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ 9.02 ಕಿ.ಮೀ. ಉದ್ದದ ಮನಾಲಿ- ಲೇಹ್ ನಡುವಣ ರಸ್ತೆ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆ ಮಾಡಿದ್ದಾರೆ.
ಅಟಲ್ ಸುರಂಗ ಮಾರ್ಗದ ವಿಶೇಷತೆಯನ್ನು ನೋಡುವುದಾದರೆ, ಇದು 9.02 ಕಿ.ಮೀ. ಉದ್ದ ಕುದುರೆ ಲಾಳಾಕೃತಿಯಲ್ಲಿದೆ. ದ್ವಿಪಥವನ್ನು ಹೊಂದಿದೆ. 8 ಮೀಟರ್ ಅಗಲದ ರಸ್ತೆ ಇದೆ. 5.525 ಮೀ. ಎತ್ತರದ ವಾಹನ ಚಲಿಸಬಹುದು. ನಿತ್ಯ 3000 ಕಾರು, 1500 ಲಾರಿಗಳ ಸಂಚರಿಸಬಹುದು. ಇದು ಸರ್ವಋತು ಸುರಂಗ ಮಾರ್ಗವಾಗಿದೆ. ಮನಾಲಿ- ಲೇಹ್ ನಡುವಣ ದೂರ 46 ಕಿ.ಮೀ. ಇಳಿಕೆಯಾಗಲಿದ್ದು, ಎರಡೂ ನಗರಗಳ ಪ್ರಯಾಣ ಅವಧಿ 4ರಿಂದ 5 ತಾಸಿನಷ್ಟುಉಳಿತಾಯವಾಗಲಿದೆ.