Aug 11, 2022, 1:41 PM IST
ನವದೆಹಲಿ (ಆ. 11): ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಕ್ಷಾಬಂಧನ ಹಬ್ಬವನ್ನು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಿದರು. ಚಿಕ್ಕ ಹುಡುಗಿಯರು ಪ್ರಧಾನಿಯವರ ಕೈಗೆ ರಾಖಿ ಕಟ್ಟಿದರು. ಈ ವೇಳೆ ನರೇಂದ್ರ ಮೋದಿ ಅವರು ಮಕ್ಕಳ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದವನ್ನು ಮಾಡಿದರು.
ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕೆಲಸ ಮಾಡುವ ಕಸಗುಡಿಸುವವರು, ಜವಾನರು, ತೋಟದ ಮಾಲಿಗಳು, ಚಾಲಕರು ಮತ್ತು ಇತರ ಉದ್ಯೋಗಿಗಳ ಹೆಣ್ಣುಮಕ್ಕಳು ನರೇಂದ್ರ ಮೋದಿಯವರಿಗೆ ರಾಖಿ ಕಟ್ಟಲು ಪ್ರಧಾನಿ ನಿವಾಸಕ್ಕೆ ಬಂದಿದ್ದರು. ಕೈಗೆ ರಾಖಿ ಕಟ್ಟಲು ಬಂದ ಪ್ರತಿ ಹುಡುಗಿಯರನ್ನು ವಿಶೇಷವಾಗಿ ಪ್ರಧಾನಿ ಮೋದಿ ಮಾತನಾಡಿದರು. ನೀನು ಎಲ್ಲಿ ಓದುತ್ತಿದ್ದೀಯ, ನಿನಗೆ ಏನು ಇಷ್ಟ, ನಿನ್ನ ಹೆಸರೇನು ಎಂದೆಲ್ಲಾ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದರು.
ಪ್ರಧಾನಿ ಪದವಿಯ ಘನತೆ ಕುಗ್ಗಿಸಬೇಡಿ, ಮೋದಿಗೆ ರಾಹುಲ್ ಗಾಂಧಿ ಟಾಂಗ್!
ನರೇಂದ್ರ ಮೋದಿಯವರಿಗೆ ರಾಖಿ ಕಟ್ಟುವ ಮೂಲಕ ಹುಡುಗಿಯರು ಸಂಭ್ರಮಿಸಿದರು. ಸುಮಾರು ಎರಡು ಡಜನ್ ಹುಡುಗಿಯರು ಪ್ರಧಾನಿಗೆ ರಾಖಿಗಳನ್ನು ಕಟ್ಟಿದರು,. ಇದರಿಂದಾಗಿ ಪ್ರಧಾನಿ ಮೋದಿ ಕೈ ರಾಖಿಗಳಿಂದ ತುಂಬಿಹೋಗಿತ್ತು. ಎಲ್ಲಾ ಬಾಲಕಿಯರಿಗೂ ಪ್ರಧಾನಿ ಮೋದಿ ಸಿಹಿಯನ್ನೂ ತಿನ್ನಿಸಿದರು. ಇದರ ನಡುವೆ ಪ್ರಧಾನಿಯವರು ರಕ್ಷಾ ಬಂಧನದಂದು ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ. ನಿಮಗೆಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.