Aug 16, 2022, 1:21 PM IST
ಬೆಂಗಳೂರು (ಅ. 16): ವೀರ್ ಸಾವರ್ಕರ್ ವಿಚಾರವಾಗಿ ರಾಜ್ಯದಲ್ಲಿ ವಾಕ್ಸಮರ, ಅಹಿತಕರ ಘಟನೆಗಳು ನಡೆಯುತ್ತಿವೆ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ವ್ಯಕ್ತಿ ಎಂದು ಕಾಂಗ್ರೆಸ್ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ದೂಷಣೆ ಮಾಡುತ್ತಿದೆ. ಹಾಗಿದ್ದಲ್ಲಿ, ಅಪ್ರತಿಮ ಸ್ವಾತಂತ್ರ್ಯವೀರನ ಬೆಚ್ಚಿ ಬೀಳಿಸುವ ಅಸಲಿ ಚರಿತ್ರೆ ಏನು ಎನ್ನುವುದರ ರಿಪೋರ್ಟ್.
ಸಾವರ್ಕರ್ ಬರೆದಿದ್ದ ಒಂದೇ ಒಂದು ಪುಸ್ತಕಕ್ಕೆ ಬೆಚ್ಚಿಬಿದ್ದಿದ್ದ ಬ್ರಿಟಿಷರು ಅವರಿಗೆ, ಭೂಲೋಕದ ನರಕ ಎಂದೇ ಹೇಳಲಾಗುವ ಅಂಡಾಮಾನ್‌ನಲ್ಲಿ ಕರಿನೀರ ಶಿಕ್ಷೆ ವಿಧಿಸಿದ್ದರು. 13 ವರ್ಷ ಈ ಕರಾಳ ಲೋಕದಲ್ಲಿ ನಲುಗಿದ್ದರು ಸಾವರ್ಕರ್. ಇಂಥ ಸಾವರ್ಕರ್ ಕಾಂಗ್ರೆಸ್ ಕಣ್ಣಲ್ಲಿ ಹೇಡಿಯಂತೆ ಕಾಣುತ್ತಿರೋದೇಕೆ? ಸಾವರ್ಕರ್ ವಿಚಾರದಲ್ಲಿ ಯಾಕಿಷ್ಟು ದ್ವೇಷ, ತಾತ್ಸಾರ..? ವಿನಾಯಕ ದಾಮೋದರ ಸಾವರ್ಕರ್ ಅನ್ನೋ ಸ್ವತಂತ್ರ ಸೇನಾನಿಯ ಚರಿತ್ರೆಯ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಿದೆ.
'ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಗಾಂಧೀಜಿ'
ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು ಸಾವರ್ಕರ್. ಅವರ ಹೋರಾಟದ ಹಾದಿಯೇ ವಿಭಿನ್ನ. ಆ ಹಾದಿಯಲ್ಲಿ ಕಷ್ಟಪಟ್ಟು ಗಳಿಸಿದ್ದೆಲ್ಲವನ್ನೂ ಸಾವರ್ಕರ್ ಕಳೆದುಕೊಂಡು ಬಿಟ್ಟಿದ್ದರು. ದೇಶಕ್ಕೆ ಸ್ವಾತಂತ್ರ್ಯ ಲಕ್ಷಾಂತರ ಕ್ರಾಂತಿಕಾರಿಗಳ ಬಲಿದಾನವಾಗಿತ್ತು. ಅಂತಹ ಕ್ರಾಂತಿಕಾರಿಗಳಲ್ಲಿ ಒಬ್ಬರು ವಿನಾಯಕ ದಾಮೋದರ್ ಸಾವರ್ಕರ್. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಲ್ಲಿ, ಅವರ ಬಲಿದಾನವನ್ನು ನೆನೆಯುವುದು ಪ್ರತಿಯೊಬ್ಬ ದೇಶಭಕ್ತರ ಕರ್ತವ್ಯ.