Feb 17, 2022, 6:16 PM IST
ನವದೆಹಲಿ(ಫೆ.17): ದೆಹಲಿಯ ರವಿದಾಸ್ ಮಂದಿರದಲ್ಲಿ ಮೋದಿ ಭಜನೆ, ಕೀರ್ತನೆ. ಮೋದಿ ಶಬ್ಧ ಕೀರ್ತನೆ ಹಿಂದಿದೆಯಾ ಪಂಚರಾಜ್ಯ ಮತ ಬೇಟೆ ರಹಸ್ಯ? ಪಂಜಾಬ್ ಕುರುಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ ಡೇರಾ ಪಾಲಿಟಿಕ್ಸ್. ಬಾಬಾ ರಾಮ್ ರಹೀಂ ಜೈಲಿನಿಂದ ಹೊರ ಬಂದಿದ್ದು ಅದೇ ಕಾರಣಕ್ಕಾ?
ಹೌದು 4 ವರ್ಷ ಜೈಲಿನಲ್ಲಿದ್ದ ಬಾಬಾ ರಾಮ್ ರಹೀಮ್ ಚುನಾವಣೆಗೆ ಒಂದು ವಾರ ಇರುವಾಗ ಪೆರೋಲ್ ಮೇಲೆ ಬಿಡುಗಡೆ ಆಗಿ ಬಂದಿದ್ದಾರೆ.ಸುಖಬೀರ್ ಸಿಂಗ್ ಬಾದಲ್ ಜಾಟ್ ಶಿಖರ ಬಾಬಾ ಗಳ ಆಶೆರ್ವಾದ ತೆಗೆದುಕೊಳ್ಳಲು ಓಡಾಡುತ್ತಿದ್ದಾರೆ.ಒಟ್ಟಿನಲ್ಲಿ ವೋಟು ಗಿಟ್ಟಿಸಲು ಈ ಬಾಬಾ ಗಳು ಬೇಕು.ಅದು ಹೇಗೆಂದರೆ ಚುನಾವಣೆಯಲ್ಲಿ ಬಾಬಾ ಗಳು ಭಕ್ತರಿಂದ ವೋಟು ಹಾಕಿಸುತ್ತಾರೆ.ಅಧಿಕಾರ ಹಿಡಿದ ರಾಜಕಾರಣಿ ಗಳು ಆನಂತರ ಬಾಬಾ ಗಳ ಸಾಮ್ರಾಜ್ಯಕ್ಕೆ ರಾಜಕೀಯ ಆಶ್ರಯ ನೀಡುತ್ತಾರೆ. ಹೀಗಿರುವಾಗ ಈ ಬಾರಿ ಪಂಜಾಬ್ ಚುನಾವಣೆಯಲ್ಲಿ ಡೇರಾ ರಾಜಕೀಯದ ಪ್ರಭಾವವೇನು? ಇಲ್ಲಿದೆ ವಿವರ