ಪಾಕಿಸ್ತಾನಕ್ಕೆ ಭಾರತದ ಪ್ರತೀಕಾರ: ಮೋದಿ ಮುಂದಿನ ನಡೆ ಏನು?

ಪಾಕಿಸ್ತಾನಕ್ಕೆ ಭಾರತದ ಪ್ರತೀಕಾರ: ಮೋದಿ ಮುಂದಿನ ನಡೆ ಏನು?

Published : Apr 25, 2025, 03:17 PM ISTUpdated : Apr 25, 2025, 03:45 PM IST

ಪಹಲ್ಗಾಮ್ ದಾಳಿಯ ನಂತರ, ಹಲವಾರು ಮಹಿಳೆಯರು ಗಂಡಂದಿರನ್ನು ಮತ್ತು ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ಭಾರತವು ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ವಾಯು ಮತ್ತು ಭೂಸೇನೆಗಳ ಮೂಲಕ ಪಾಕಿಸ್ತಾನಕ್ಕೆ ಹೊಡೆತ ನೀಡಿರುವ ಭಾರತ ಮುಂದೇನು ಮಾಡಲಿದೆ ಎಂಬುದು ಕುತೂಹಲಕಾರಿಯಾಗಿದೆ.

ವೆಕೇಷನ್​ಗೆ ಅಂತ ಹೋದವರು ಕಿರಾತಕರ ಗುಂಡೇಟಿಗೆ ಬಲಿಯಾದ್ರು. ಹತ್ತಾರು ಹೆಣ್ಣುಮಕ್ಕಳು ಗಂಡನನ್ನ ಕಳೆದುಕೊಂಡರು.. ಮಕ್ಕಳು ತಂದೆಯನ್ನ ಕಳೆದುಕೊಂಡರು. ಆದರೆ ಅವರ ಕಣ್ಣೀರಿಗೆ ಬೆಲೆ ಇಲ್ವಾ? ಖಂಡಿತ ಇದೆ. ಅದೇ ಕಾರಣಕ್ಕೆ ಇಡೀ ದೇಶ ಇವತ್ತು ಪ್ರತೀಕಾರದ ಮಾತನ್ನಾಡುತ್ತಿರೋದು. ಆದ್ರೆ ಆ ಪ್ರತೀಕಾರ ಹೇಗೆ ಆಗುತ್ತೆ ಅನ್ನೋದನ್ನ ಮೋದಿ ಡಿಸೈಡ್​​ ಮಾಡಬೇಕು. ಈಗಾಗಲೇ ವಾಯು ಮತ್ತು ಭೂ ಸೇನೆ ಮೂಲಕ ಪಾಕಿಸ್ತಾನಕ್ಕೆ ಹೊಡೆತ ಕೊಟ್ಟಿರೋ ಭಾರತ ಈಗ ಏನ್ಮಾಡುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. 26 ಅಮಾಯಕ ಜನರ ಸಾವಿಗೆ ಕಾರಣರಾದವರನ್ನ ಹೇಗೆ ಹೊಡೀತ್ತಾರೆ ಅನ್ನೋದು ಈಗ ಎಲ್ಲರ ಪ್ರಶ್ನೆಯಾಗಿದೆ. ಆದ್ರೆ ಸದ್ಯ ಭಾರತಕ್ಕಿರುವ ಆಪ್ಷನ್​​ ಏನು?

ಪಹಲ್ಗಾಮ್‌ ದಾಳಿಯ ನಂತರ ಕಾಶ್ಮೀರಿ ಮುಸ್ಲಿಂ ಯುವಕನೋರ್ವನ ವೀಡಿಯೋ ಸಖತ್ ವೈರಲ್: ಆತ ಹೇಳಿದ್ದೇನು

ಪಾಕಿಸ್ತಾನದ ಈ ನಡೆಯೇ ಅವರಿಗೆ ಎಷ್ಟು ಭಯ ಹುಟ್ಟಿದೆ ಅನ್ನೋದನ್ನ ತೋರಿಸುತ್ತಿದೆ. ಏರ್​ ಸ್ಟ್ರೈಕ್​ ಆಯ್ತು. ಸರ್ಜಿಕಲ್ಲೂ ಆಯ್ತು, ಭಾರತ ಈ ಬಾರಿ ನೇವಿಯನ್ನ ಬಳಿಸಿ ನಮ್ಮ ಮೇಲೆ ದಾಳಿ ಮಾಡಬಹುದು ಅಂತ ಬೆದರಿಬಿಟ್ಟಿದೆ. ಅದ್ರೆ ಮೋದಿ ತಲೆಯಲ್ಲಿ ಓಡ್ತಿರೋದೇ ಬೇರೆ. ಹಾಗಾದ್ರೆ ಈಗ ಮೋದಿ ಏನ್ಮಾಡ್ತಾರೆ?  ಪಾಕಿಗಳ ಹುಟ್ಟಡಗಿಸಲು ಸರ್ಕಾರದ ಮುಂದಿರುವ ಆಯ್ಕೆಗಳೇನು ಅನ್ನೋ ಕಂಪ್ಲೀಟ್​​ ಡಿಟೇಲ್ಸ್​​ ಇಲ್ಲಿದೆ.
 

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more