ಭಾರತದ ಲಸಿಕೆ ಮೇಲೆ ಜಗತ್ತೇ ಇಟ್ಟಿದೆ ನಂಬಿಕೆ, ಜನರಿಗೆ ಬೇಡ ಅಂಜಿಕೆ..!

Jan 17, 2021, 11:36 AM IST

ಬೆಂಗಳೂರು (ಜ. 17): ಒಂದು ವರ್ಷದಿಂದ ಇಡೀ ದೇಶವನ್ನು ಕಾಡುತ್ತಿದ್ದ ಕೊರೋನಾ ಮಹಾಮಾರಿಗೆ ಕಡೆಗೂ ಲಸಿಕೆ ಬಂದಿದೆ. ಭಾರತದ ಪಾಲಿಗೆ ಇದೊಂದು ಸುದಿನ. ಎಲ್ಲರೂ ಆರೋಗ್ಯವಂತರಾಗಲಿ ಎಂಬ ಸದಾಶಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಲಸಿಕೆ ನೀಡಿಕೆಗೆ ಚಾಲನೆ ನೀಡಿದ್ದಾರೆ.

ಪಾಕ್‌ನಲ್ಲಿ ಶುರುವಾಗಿದೆ ಅಂತರ್ಯುದ್ಧ, ಅನ್ನಕ್ಕಾಗಿ ಹಾಹಾಕಾರ; ಬಿಕಾರಿಯಾಗ್ತಿದೆಯಾ ಪಾಕ್..?

ಮೊದಲ ದಿನವೇ 1.91 ಲಕ್ಷ ವೈದ್ಯಕೀಯ ಸಿಬ್ಬಂದಿ ಹಾಗೂ ಕೊರೋನಾ ವಿರುದ್ಧ ಹೋರಾಡಿದ ಇತರ ಮುಂಚೂಣಿ ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ,. ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಸಿಬ್ಬಂದಿಗೆ ಉಚಿತವಾಗಿ ಲಸಿಕೆ ವಿತರಿಸುವ ಉದ್ದೇಶ ಹೊಂದಿದೆ. ನಂತರ 2ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟಆರೋಗ್ಯವಂತರು ಮತ್ತು ವಿವಿಧ ಸಮಸ್ಯೆಯಿಂದ ಬಳಲುತ್ತಿರುವ 50 ವರ್ಷ ಕೆಳಗಿನ 27 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಂಡಿದೆ. ಮೂರನೇ ಹಂತದಲ್ಲಿ ಅರ್ಹ 30 ಕೋಟಿ ಜನರಿಗೆ ನೀಡುವ ಉದ್ದೇಶವಿದೆ.