Apr 25, 2021, 4:54 PM IST
ನವದೆಹಲಿ(ಏ.25): ಸೋಂಕಿತರ ಪ್ರಾಣ ಉಳಿಸಲು ಆಪರೇಷನ್ದ ಆಕ್ಸಿಜನ್ ಯಾಗ. ಏರ್‌ಲಿಫ್ಟ್ ಮೂಲಕ ರವಾನೆಯಾಗುತ್ತಿದೆ ಜೀವ ಉಳಿಸುವ ಸಂಜೀವಿನಿ. ಸಿಂಗಾಪುರದಿಂದ ಬಂತು ಆಕ್ಸಿಜನ್, ಅತ್ತ ದುಬೈನಿಂದಲೂ ಬರುತ್ತೆ ಆಮ್ಲಜನಕ. ಕೇಂದ್ರದ ಆಕ್ಸಿಜನ್ ಆಪರೇಷನ್‌ನ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಹೌದು ದೇಶದಲ್ಲಿ ಕೊರೋನ ಎರಡನೇ ಅಲೆ ಎಂಟ್ರಿ ಕೊಟ್ಟಾಗಿನಿಂದ ಉಸಿರಾಡೋ ಗಾಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಜನರು ಮಹಾಮಾರಿಯಿಂದಾಗಿ ಉಸಿರಾಡಲಾರದೇ ಪ್ರಾಣ ಬಿಡುತ್ತಿದ್ದಾರೆ. ಹೀಗಿರುವಾಗ ಆಮ್ಲಜನಕದ ಕೊರತೆ ಕಂಡು ಬಂದಿದೆ. ಆದರೀಗ ಕೇಂದ್ರ ಈ ಆಕ್ಸಿಜನ್ ಪೂರೈಕೆಗೆ ಮಹತ್ವದ ಹೆಜ್ಜೆ ಇರಿಸಿದೆ.