75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಮೋದಿ ಪಂಚ ಮಹಾ ಪ್ರತಿಜ್ಞೆ!

Aug 16, 2022, 3:51 PM IST

ಬೆಂಗಳೂರು (ಆ.16): ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೃತ ಮಹೋತ್ಸವದ ಹೊತ್ತಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ನಂತರ ಅಂದಾಜು 82 ನಿಮಿಷಗಳ ಕಾಲ ಮಾತನಾಡಿದರು. ಈ ವೇಳೆ ಅವರು ಹೇಳಿದ ಪಂಚ ಪ್ರತಿಜ್ಞೆ ಗಮನಸೆಳೆದಿದೆ. ಅಮೃತ ಮಹೋತ್ಸವದ ಸಂಭ್ರಮದ ಬೆನ್ನಲ್ಲಿಯೇ ಶತಮಾನೋತ್ಸವದಲ್ಲಿ ದೇಶ ಯಾವ ಗುರಿಯನ್ನು ಮುಟ್ಟಬೇಕು ಎನ್ನುವ ನಿಟ್ಟಿನಲ್ಲಿ ಮಾತನಾಡಿದರು.

ಮೋದಿ ಅವರು ಆಡಿದ ಒಂದೊಂದು ಮಾತೂ ಕೂಡ, ದೇಶದ ನಾಗರೀಕರಿಗೆ ಅತಿಮುಖ್ಯವಾದ ಸಂದೇಶಗಳನ್ನೂ ರವಾನಿಸಿದೆ. ಪ್ರಧಾನಿ ಮೋದಿ ಅವರು, ದೇಶದ ಜನತೆಗೆ ಪಂಚ ಪ್ರಾಣ ಅನ್ನೋ ಅಸ್ತ್ರ ಕೊಟ್ಟು, ಅಭಿವೃದ್ಧಿ ಯ ಕಡೆ ನಡೆಯೋದನ್ನಷ್ಟೇ ಹೇಳಿಲ್ಲ. ಅದರ ಜೊತೆಗೆ ಈ ದೇಶದ ಜನತೆ, ಯಾರ್ಯಾರ ಸ್ಮರಣೆ ಮಾಡಬೇಕು ಅನ್ನೋದನ್ನ ಕೂಡ ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯಕ್ಕೆ ಕೇಳಿದ್ರು ಶುಭ ಮಹೂರ್ತ, ಆಗಸ್ಟ್‌ 15ರ ದಿನಕ್ಕಾಗಿ ಕೇಳಲಾಗಿತ್ತು ಜಾತಕ

ನರೇಂದ್ರ  ಮೋದಿ ತಮ್ಮ ಸುದೀರ್ಘ ಭಾಷಣದಲ್ಲಿ ಇತಿಹಾಸ ನಿರ್ಮಿಸಿದವರನ್ನ ಮಾತ್ರವೇ ಅಲ್ಲ. ಇತಿಹಾಸ ಮುನ್ನಡೆಸಬೇಕಾದ ಹೊಣೆ ಹೊತ್ತವರಿಗೂ ಕಿವಿಮಾತು ಹೇಳಿದರು. ದೇಶದ ಪ್ರಜಾಪ್ರಭುತ್ವ, ನಾರಿ ಶಕ್ತಿಯ ಬಗ್ಗೆ ಮಾತನಾಡುತ್ತಾ, ಭಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ಬಗ್ಗೆಯೂ ತಮ್ಮ ಅಸಮಾಧಾನವನ್ನು ಹೊರಹಾಕಿದರು.