Omicron Threat: ಕೊರೋನಾ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡಲು ತಜ್ಞರ ಸಲಹೆ!

Dec 2, 2021, 12:28 PM IST

ಕೊರೋನಾ ಹೊಸ ರೂಪಾಂತರಿ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ಇದನ್ನು ತಡೆಯಲು ಬೂಸ್ಟರ್ ನೀಡಬೇಕಡಂಬ ಚರ್ಚೆ ಆರಂಭವಾಗಿದೆ. ಬೂಸ್ಟರ್ ಡೋಸ್ ಕೊಟ್ದಟರೂ ಯಾರಿಗೆ ಮೊದಲು ಕೊಡಬೇಕು? ಎನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.

ಇನ್ನು ಜನರಿಗೆ ಬೂಸ್ಟರ್ ಡೋಸ್ ನೀಡಬೇಕೆಂಬುವುದು ತಜ್ಞರ ಅಭಿಪ್ರಾಯವಾಗಿದೆ. ಈ ಬೂಸ್ಟರ್ ಡೋಸ್ ಎಲ್ಲಕ್ಕಿಂತ ,ಮೊದಲು ಆರೋಗ್ಯ ಕಾರ್ಯಕರ್ತರಿಗೆ ನೀಡಬೇಕು. ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡಿ ತುಂಬಾ ಸಮಯವಾಗಿದೆ. ಮೂರನೇ ಅಲೆ ಬಂದರೆ ಕೊರೋನಾ ವಾರಿಯರ್ಸ್‌ ಹೋರಾಟಬೇಕು. ಹೀಗಾಗಿ ಅವರಿಗೇ ಆದ್ಯತೆ ನಿಡಬೇಕು ಎಂದು ಡಾ. ವಿಶಾಲ್ ರಾವ್ ಹೇಳಿದ್ದಾರೆ.

ಇನ್ನು ಬೂಸ್ಟರ್ ಡೋಸ್‌ ನೀಡುವ ಸಂದದರ್ಭದಲ್ಲಿ ಈವರೆಗೆ ಒಂದೂ ಡೋಸ್ ಪಡೆಯದವರನ್ನು ನಿರ್ಲಕ್ಷಿಸಬಾರದು. ಅವರಿಗೆ ಮೊಟ್ಟ ಮೊದಲ ಆದ್ಯತೆ ನಿಡಲೇಬೇಕು ಎಂದೂ ತಜ್ಷರು ತಿಳಿಸಿದ್ದಾರೆ,