Dec 27, 2023, 4:42 PM IST
ಭಾರತಕ್ಕೆ ಆಗಮಿಸುತ್ತಿದ್ದ ತೈಲ ಹಡಗಿನ ಮೇಲೆ ಹೌತಿ ಉಗ್ರರು ಡ್ರೋನ್ ದಾಳಿ ನಡೆಸಿದ್ದಾರೆ. ಕೆಂಪು ಸಮುದ್ರದಲ್ಲಿ ಶುರುವಾಗಿರುವ ಈ ಕೋಲಾಹಲ ಪೆಟ್ರೋಲಿಯಂ ಬೆಲೆಯನ್ನು ದುಪ್ಪಟ್ಟು ಮಾಡುವ ಪರಿಸ್ಥಿತಿಗೆ ತಳ್ಳುವ ಆತಂಕ ಎದುರಾಗಿದೆ. ಹೌತಿ ಉಗ್ರರ ಕೋಪ ಇರೋದು ಇಸ್ರೇಲಿನ ಮೇಲೆ. ಆ ಉಗ್ರರ ಪ್ರೀತಿ ಇರೋದು ಗಾಜಾಪಟ್ಟಿಯ ಹಮಾಸ್ ಉಗ್ರರ ಮೇಲೆ.. ಇದರ ಮಧ್ಯೆ, ಅದ್ಯಾವ ಕಾರಣ ಇಟ್ಕೊಂಡು, ಭಾರತವೂ ಸೇರಿದಂತೆ ಜಗತ್ತಿನ ಹತ್ತಾರು ದೇಶಗಳಿಗೆ ಟೆನ್ಷನ್ ಕೊಡೋಕೆ ನೋಡ್ತಿದ್ದಾರೆ ಈ ಹೌತಿಗಳು? ಇಲ್ಲಿದೆ ವಿವರ.