News Hour: ರೂಪಾಂತರಿ ತಡೆಗೆ ನೈಟ್ ಕರ್ಫ್ಯೂ, ಏನೆಲ್ಲ ಹೊಸ ನಿಯಮ?

Dec 29, 2021, 12:59 AM IST

ಬೆಂಗಳೂರು(ಡಿ. 29)  ಕೊರೋನಾ (Coronavirus) ರೂಪಾಂತರಿ ಓಮಿಕ್ರೋನ್ (Omicron) ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ (Karnataka Govt)ದಿಟ್ಟ ಹೆಜ್ಜೆ ಇಟ್ಟುದ್ದು ಹೊಸ ವರ್ಷ ಆರಂಭದ ಸಂದರ್ಭದಲ್ಲಿ ಹತ್ತು ದಿನಗಳ ನೈಟ್ ಕರ್ಫ್ಯೂ (Night Curfew) ಜಾರಿ ಮಾಡಿದೆ.  ವ್ಯಾಪಾರಿಗಳಿಗೆ ಮತ್ತು ನಾಗರಿಕರಿಗೆ ಇದು ಹಿಂಸೆ ತಂದಿದೆ ಎನ್ನುವುದು ಅವರ ಮಾತಿನಿಂದಲೇ ಗೊತ್ತಾಗುತ್ತಿದೆ. ವ್ಯಾಪಾರ ವಹಿವಾಟಿಗೆ ತೀವ್ರ ತೊಂದರೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಹೊಸ ಕೊರೋನಾ  ಲೆಕ್ಕ ಇಲ್ಲಿದೆ

ರಾತ್ರಿ ಹತ್ತುಗಂಟೆ ನಂತರ ಎಲ್ಲ ವಹಿವಾಟು ಸ್ಥಬ್ಧವಾಗಬೇಕು ಎಂದು ಸರ್ಕಾರ ತಿಳಿಸಿದ್ದು ಪೊಲೀಸ್ (Karnataka Police)ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅತಿ ವೇಗವಾಗಿ ಪೂರ್ಣಗೊಂಡ ಕಾನ್ ಪುರ ಮೆಟ್ರೋ ಸಂಚಾರವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕಾರ್ಪಣೆ ಮಾಡಿದ್ದಾರೆ. ಇದು ನಮ್ಮ ಯೋಜನೆಯಾಗಿತ್ತು ಎಂದು ಇನ್ನೊಂದು ಕಡೆ ಅಖಿಲೇಶ್ ಯಾದವ್ ಹೇಳಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..