* ಸದ್ದು ಮಾಡುತ್ತಲೇ ಇದೆ ಬಿಟ್ ಕಾಯಿನ್ ಪ್ರಕರಣ
* ಬಿಟ್ ಕಾಯಿನ್ ದುಡ್ಡು ಯಾರಿಗೆ ಹೋಗಿದೆ? ಬಹಿರಂಗ ಮಾಡಿ
* ಕಾಂಗ್ರೆಸ್‌ನವರ ಜತೆ ಶ್ರೀಕಿ ಹೆಸರು ಇತ್ತಲ್ಲ.. ನಿಮ್ಮ ಅವಧಿಯದ್ದೇ ಕೆಲಸ
* 'ಹದಿನೈದು ದಿನದಲ್ಲಿ ಎಲ್ಲ ಬಹಿರಂಗ ಮಾಡ್ತೆನೆ'
ಬೆಂಗಳೂರು(ನ. 13) ಬಿಟ್ ಕಾಯಿನ್ (Bitcoin Scam) ಸೀಝ್ ಮಾಡಲಾಗಿದೆ ಅಂದ ಮೇಲೆ ಅದರ ಹಣ ಯಾರಿಗೆ ಹೋಗಿದೆ? ಬಹಿರಂಗ ಮಾಡಿ ಎಂದು ಕರ್ನಾಟಕ ಸರ್ಕಾರಕ್ಕೆ(Karnataka Govt) ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಸವಾಲು ಹಾಕಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪ-ಪ್ರತ್ಯಾರೋಪ ಜೋರಾಗಿದೆ. ಬಿಜೆಪಿ ನಾಯಕರು, ಸಚಿವರು ಕಾಂಗ್ರೆಸ್(Congress) ಮೇಲೆ ಪ್ರಹಾರ ಮಾಡಿದ್ದಾರೆ. ತನಿಖೆಯಿಂದ ಎಲ್ಲವೂ ಭಯಲಾಗುತ್ತದೆ ಎಂದಿದ್ದಾರೆ.
ಹ್ಯಾಕರ್ ಶ್ರೀಕಿಯ ರಣ ರೋಚಕ ಇತಿಹಾಸ
ಬಿಟ್ ಕಾಯಿನ್ ಪ್ರಕರಣದಲ್ಲಿ ತನಿಖೆಯು ಹಾದಿ ತಪ್ಪಿಸುವ ಕೆಲಸವನ್ನು ನೀವೇ ಮಾಡಬೇಡಿ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಎಚ್‌ಡಿ (HD Kumaraswamy) ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಜನರಿಗೆ ಹೇಳಿ ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಸಚಿವ ಸುಧಾಕರ್(Dr. K Sudhakar) ಕಾಂಗ್ರೆಸ್ ಪ್ರಶ್ನೆಗಳಿಗೆ ಒಂದಾದ ಮೇಲೆ ಒಂದು ಉತ್ತರ ನೀಡಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ...