ಮುಗಿಯದ ಸಿದ್ದು-ಬಿಜೆಪಿ 'ತಾಲೀಬಾನ್' ಜಟಾಪಟಿ, ಪಂಜಾಬ್ ಕಾಂಗ್ರೆಸ್‌ ಅಯೋಮಯ!

Sep 28, 2021, 11:39 PM IST

ಬೆಂಗಳೂರು(ಸೆ. 28)  ಬಿಜೆಪಿ (BJP)ಮತ್ತು ಆರ್‌ ಎಸ್‌ಎಸ್(RSS) ನವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಅವರನ್ನು ತಾಲೀಬಾನಿಗಳು ಎಂದು ಕರೆದಿದ್ದೇನೆ ಎಂದು ಸಿದ್ದರಾಮಯ್ಯ (Siddaramaiah) ಮತ್ತೆ ಹೇಳಿಕೆ  ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್‌ ನವರನ್ನು ತಾಲಿಬಾನಿಗಳು(Taliban) ಎಂದು ಕರೆದಿದ್ದು  ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಚುನಾವಣೆ ದೂರದಲ್ಲಿ ಇರುವಾಗಲೇ ಜೆಡಿಎಸ್  ರಣತಂತ್ರ

ಹಣದಾಸೆಗೆ ಬಿದ್ದು ಉಗ್ರ ತರಬೇತಿ ಪಡೆದುಕೊಂಡು ಬಂದವ ಸೇನೆ ಕೈಗೆ ಸೆರೆ ಸಿಕ್ಕಿದ್ದಾನೆ. ಈತ ಒಂದು ಯುದ್ಧಕ್ಕೆ ಬೇಕಾಗುವಷ್ಟು ಮದ್ದು-ಗುಂಡು  ರೈಫಲ್ ಗಳನ್ನು ಹೊತ್ತುಕೊಂಡು ಬಂದಿದ್ದ. ಕೊರೋನಾ ಸಂದರ್ಭದಲ್ಲಿ ಜನರಿಗೆ ಕೆಲಸವಿಲ್ಲದೇ ಮನೆಯಲ್ಲೇ ಕೂತಿದ್ರು. ಆದ್ರೆ, ಕೊರೋನಾ ಕಾಲದಲ್ಲೂ ಪೊಲೀಸರು ಭರ್ಜರಿ ದಂಡ ವಸೂಲಿ ಮಾಡಿದ್ದಾರೆ. ಪಂಜಾಬ್ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ. ಸಿಎಂ ಆಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್  ರಾಜೀನಾಮೆ ನಂತರ ಇದೀಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದರ ನವಜೋತ್ ಸಿಧು ಸಹ ರಾಜೀನಾಮೆ  ನೀಡಿದ್ದಾರೆ.   ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇಲೆ 5 ಮಂದಿ ಭಜರಂಗ ದಳ ಕಾರ್ಯಕರ್ತರನ್ನು ಸುರತ್ಕಲ್ ನಲ್ಲಿ ಬಂಧಿಸಲಾಗಿದೆ. ಅಚ್ಚರಿ ಅಂದ್ರೆ ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಸ್ಟೆಷನ್‌ನಿಂದ ಹೊರಬಂದಿದ್ದಾರೆ.