May 20, 2021, 1:24 PM IST
ಹೈದರಾಬಾದ್(ಮೇ.20): ಕೊರೋನಾ ವಿರುದ್ಧದ ಹೋರಾಟಕ್ಕೆ ಸದ್ಯ ಮತ್ತೊಂದು ರಾಮಬಾಣ ಸಿದ್ಧವಾಗುತ್ತಿದೆ. ಭಾರತ್ ಬಯೋಟೆಕ್‌ನ ಮತ್ತೊಂದು ಲಸಿಕೆ ಸಜ್ಜಾಗುತ್ತಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಇದರ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ.
ಭಾರತ್ ಬಯೋಟೆಕ್‌ನ ಈ ನೂತನ ನೇಸಲ್ ವ್ಯಾಕ್ಸಿನ್‌ನ ಮೊದಲ ಹಂತದ ಪ್ರಯೋಗ ಮುಕ್ತಾಯಗೊಂಡಿದೆ. ನಾಗ್ಪುರದ ರಾಹತೆ ಆಸ್ಪತ್ರೆಯಲ್ಲಿ ಐವತ್ತು ಜನರ ಮೇಲೆ ಈ ಪ್ರಯೋಗ ನಡೆದಿದೆ.
ಮೂಗಿನ ಎರಡೂ ಹೊಳ್ಳೆಗೆ 0.2ml ಎರಡು ಡ್ರಾಪ್ ವ್ಯಾಕ್ಸಿನ್ ಹಾಕಿ ಈ ಪ್ರಯೋಗ ನಡೆಸಲಾಗಿದೆ. ಹೀಗಿರುವಾಗ ಈ BBBV154 ಕೊರೋನಾ ಶಮನಗೊಳಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona