Dec 26, 2021, 9:16 AM IST
ಬೆಂಗಳೂರು (ಡಿ. 26): ಹೊಸವರ್ಷದಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ (Covid 19) ಇನ್ನಷ್ಟು ಬಲ ಬರಲಿದೆ. ಡಿಎನ್‌ಎ (DNA) ಆಧಾರಿತ ಮೊದಲ ಲಸಿಕೆ ಸಿದ್ಧಪಡಿಸಿದೆ ಭಾರತ. ಮೂಗಿನಿಂದ ನೀಡುವ ಮೊದಲ ಲಸಿಕೆ ಶೀಘ್ರ ಮಾರುಕಟ್ಟೆಗೆ ಬರಲಿದೆ.
ಜನವರಿ 3 ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ. 'ಜಗತ್ತಿನಾದ್ಯಂತ ಒಮಿಕ್ರೋನ್ ಅಬ್ಬರ ಆರಂಭವಾಗಿದೆ. ಭಾರತದಲ್ಲೂ ವೈರಸ್ ಪತ್ತೆಯಾಗುತ್ತಿದೆ. ಆತಂಕ ಬೇಡ. ಎಚ್ಚರದಿಂದಿರಿ. ಮಾಸ್ಕ್, ಸಾಮಾಜಿಕ ಅಂತರ ಸೇರಿ ಕೋವಿಡ್ ಸನ್ನಡತೆ ಪಾಲಿಸಿ' ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.