ಮಹಾರಾಷ್ಟ್ರಕ್ಕೆ ಅಚ್ಚರಿ ವ್ಯಕ್ತಿಯನ್ನ ಸಿಎಂ ಮಾಡ್ತಾರಾ ಮೋದಿ-ಶಾ ಜೋಡಿ?

Dec 3, 2024, 1:18 PM IST

ಮುಂಬೈ (ಡಿ.3): ಮಹಾರಾಷ್ಟ್ರ ಫಲಿತಾಂಶ ಬಂದು 10 ದಿನವಾಗಿದ್ದರೂ ಸಿಎಂ ಯಾರಾಗಬೇಕು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಮಹಾರಾಷ್ಟ್ರಕ್ಕೆ ಬಿಜೆಪಿಯಿಂದಲೇ ಸಿಎಂ ಆಗೋದು ಖಚಿತವಾಗಿದ್ದರೂ, ಸಿಎಂ ಆಗೋ ವ್ಯಕ್ತಿ ಯಾರು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.

ಇದರ ನಡುವೆ ಮಹಾರಾಷ್ಟ್ರದಲ್ಲಿ ನರೇಂದ್ರ ಮೋದಿ-ಅಮಿತ್‌ ಶಾ ಜೋಡಿ ಅಚ್ಚರಿ ವ್ಯಕ್ತಿಯನ್ನ ಸಿಎಂ ಮಾಡ್ತಾರಾ ಅನ್ನೋ ಕುತೂಹಲ ಎದುರಾಗಿದೆ. ಮಹಾರಾಷ್ಟ್ರದ ಸಿಎಂ ಆಗಲು ದೇವೇಂದ್ರ ಫಡ್ನವೀಸ್ ಫ್ರಂಟ್ ರನ್ನರ್  ಆಗಿದ್ದಾರೆ.ದೇವೇಂದ್ರ ಫಡ್ನವೀಸ್ ಹೆಸರು ಘೋಷಣೆ ಮಾಡಲು ಇಷ್ಟು ತಡ ಯಾಕೆ ಅನ್ನೋದೇ ಈಗಿರುವ ಪ್ರಶ್ನೆಯಾಗಿದೆ.

ಪೊಲೀಸರಿಗೆ ಸಿಕ್ತು ಶೋಭಿತಾ ಶಿವಣ್ಣ ಡೆತ್‌ ನೋಟ್‌, ಸ್ಫೋಟಕ ಮಾಹಿತಿ ಬಹಿರಂಗ..

ಮಹಾರಾಷ್ಟ್ರಕ್ಕೆ ಇಬ್ಬರು ವೀಕ್ಷಕರನ್ನ  ಬಿಜೆಪಿ ಹೈಕಮಾಂಡ್ ನೇಮಿಸಿದೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಇಬ್ಬರು ವೀಕ್ಷಕರ ನೇಮಕ ಮಾಡಲಾಗಿದೆ. ವಿಜಯ್ ರೂಪಾನಿ ಮತ್ತು ನಿರ್ಮಲಾ ಸೀತಾರಾಮನ್ ವೀಕ್ಷಕರಾಗಿ ನೇಮಕ ಮಾಡಲಾಗಿದೆ