ಕೊರೊನಾ 'ಮಹಾ' ಸ್ಫೋಟ, ಲಾಕ್‌ಡೌನ್‌ ಮೊರೆ ಹೋದ ನಾಗಪುರ, ರಾಜ್ಯಕ್ಕೂ ತಪ್ಪಿಲ್ಲ ಕಂಟಕ

Mar 12, 2021, 2:53 PM IST

ಬೆಂಗಳೂರು (ಮಾ. 12): ಹಲವು ನಿರ್ಬಂಧಗಳನ್ನು ಹೇರಿದರೂ ಮಹಾರಾಷ್ಟ್ರದಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವೈರಸ್‌ ಹರಡುವಿಕೆ ನಿಯಂತ್ರಣಕ್ಕೆ ಸಿಗದ ಕಾರಣ ಮಹಾರಾಷ್ಟ್ರ ಸರ್ಕಾರ ನಾಗಪುರದಲ್ಲಿ ಮಾ.15 ರಿಂದ 21ರವರೆಗೆ ಒಂದು ವಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ರಾಜ್ಯದ ಇನ್ನೂ ಕೆಲವು ನಗರಗಳಲ್ಲಿ ಕೊರೋನಾ ಸೋಂಕು ಅಧಿಕವಾಗಿದ್ದು, ಅಲ್ಲೂ ಲಾಕ್‌ಡೌನ್‌ ಹೇರುವ ಕುರಿತು 2-3 ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಿಳಿಸಿದ್ದಾರೆ.

ಇಲ್ಲಿ ಶಿವಲಿಂಗಕ್ಕೆ ನಡೆಯುತ್ತೆ ನಿಗೂಢ ಪೂಜೆ, ಸಿಸಿಟಿವಿ ಇಟ್ರೂ ಗೊತ್ತಾಗಲ್ಲಂತೆ!

ನಾಸಿಕ್‌, ಮಾಲೇಗಾಂವ್‌, ನಂದಗಾವ್‌ನಲ್ಲಿ ಬುಧವಾರದಿಂದಲೇ ಅನಿರ್ದಿಷ್ಟಾವಧಿವರೆಗೆ ಶಾಲೆ- ಕಾಲೇಜು, ಕೋಚಿಂಗ್‌ ಸಂಸ್ಥೆಗಳನ್ನು ಬಂದ್‌ ಮಾಡಿಸಲಾಗಿದೆ. 10 ಹಾಗೂ 12ನೇ ತರಗತಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಕಲ್ಯಾಣ್‌-ದೊಂಬಿವಿಲಿ ಮತ್ತು ನಂದರ್ಬಾರ್‌ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.