ನಾಗರ ಹಾವುಗಳಿಗೆ ಕಿಸ್ ಕೊಡುವ ಚಟಕ್ಕೆ ಬಿದ್ದ ಕಿಸ್ಸಿಂಗ್ ಸ್ಟಾರ್ ಅಂದರ್..!

Mar 31, 2022, 4:19 PM IST

ಇಲ್ಲೊಂದು ಕಡೆ ಯುವಕನೊಬ್ಬ ನಾಗರ ಹಾವುಗಳಿಗೆ ಕಿಸ್ ಕೊಡುವ ಚಟ ಹೊಂದಿದ್ದು, ಇದೀಗ ಆ ಕಿಸ್ಸಿಂಗ್ ಸ್ಟಾರ್ ಅಂದರ್ ಆಗಿದ್ದಾನೆ. ಹಾವು ಅಂದ್ರೆ ನಾವು ಒಂದು ಮೈಲಿ ದೂರ ಓಡಿ ಹೋಗ್ತೀವಿ. ಅಂತಾದ್ರಲ್ಲಿ ಇಲ್ಲೊಬ್ಬ ವಿಷ ಸರ್ಪಗಳಿಗೆ ಮುತ್ತುಕೊಟ್ಟು ಕಿಸ್ಸಿಂಗ್ ಸ್ಟಾರ್ ಆಗುವ ಬರದಲ್ಲಿ ಅಂದರ್ ಆಗಿದ್ದಾನೆ. 

 ಮಹರಾಷ್ಟ್ರದ ಸಾಂಗ್ಲಿಯಲ್ಲಿ 22 ವರ್ಷದ ಪ್ರದೀಪ್ ಅಡ್ಸುಲೆ ಎಂಬ ಯುವಕ ಸೋಶಿಯಲ್ ಮಿಡಿಯಾ ಸ್ಟಾರ್ ಆಗುವುದಕ್ಕೆ ಜೀವ ಭಯವಿಲ್ಲದೆ ನಾಗರ ಹಾವನ್ನ ಹಿಡಿದು ಅದಕ್ಕೆ ಮುತ್ತು ಕೊಡುವ ದುಸ್ಸಾಹಸಕ್ಕೆ ಕೈ ಹಾಕಿದ್ದ. ಯಾವಾಗ ಈ ಕಿಸ್ಸಿಂಗ್ ಸ್ಟಾರ್ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಯ್ತೋ,   ಫೇಮಸ್ ಆಗ್ಬೇಕು ಅಂತ ಅಂದುಕೊಂಡಿದ್ದವ ಅಂದರ್ ಆಗಿದ್ದಾನೆ,. ಸಾಂಗ್ಲಿ ಅರಣ್ಯ ಇಲಾಖೆ ಈ ವಿಡಿಯೋವನ್ನು ನೋಡಿ ಈತನನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಬಂಧಿಸಿದೆ..