ಉತ್ತರದಲ್ಲಿ ಯೋಗಿ ನೇತೃತ್ವದಲ್ಲೇ ಮುಂದಿನ ಚುನಾವಣೆ, ಬಂಗಾಳದಲ್ಲಿ ಕಂಗಾಲಾಗಿದ್ಯಾ ಬಿಜೆಪಿ?

Jun 13, 2021, 3:03 PM IST

ಬೆಂಗಳೂರು (ಜೂ. 13): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬದಲಾವಣೆಗೆ ಸಂಬಂಧಿಸಿದಂತೆ ಎದ್ದಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಬಿಜೆಪಿ ಹೈಕಮಾಂಡ್‌ ಯೋಗಿ ಆದಿತ್ಯನಾಥ್‌ ಅವರ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟಿದ್ದು, 2022ರ ವಿಧಾನಸಭೆ ಚುನಾವಣೆಯನ್ನು ಯೋಗಿ ಆದಿತ್ಯನಾಥ್‌ ಅವರ ನೇತೃತ್ವದಲ್ಲೇ ಎದುರಿಸಲು ಒಲುವು ತೋರಿದೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ಶ್ರೀರಕ್ಷೆ, ಭಿನ್ನಮತರ ಅಸಮಾಧಾನ; ಸಿಎಂ ವಿರುದ್ಧ ಸ್ಫೋಟಗೊಳ್ಳುತ್ತಾ ಬಂಡಾಯ.?

ಇನ್ನೊಂದು ಕಡೆ 4 ವರ್ಷಗಳ ಹಿಂದೆ ಟಿಎಂಸಿಗೆ ವಿದಾಯ ಹೇಳಿ ಬಿಜೆಪಿ ಸೇರಿದ್ದ ಮುಕುಲ್‌ ರಾಯ್‌ ಮರಳಿ ತೃಣಮೂಲ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಈ ಮೂಲಕ ಬಂಗಾಳದಲ್ಲಿ ಬೇರೂರಲು ಯತ್ನಿಸುತ್ತಿರುವ ಬಿಜೆಪಿಗೆ ಭರ್ಜರಿ ಏಟು ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮೋದಿಗೆ ಘಟಬಂಧನ್ ಈಗಿನಿಂದಲೇ ಶುರುವಾಗಿದ್ಯಾ..?