ಜನರ ಮಾಹಿತಿ ರಕ್ಷಣೆ, ಮಾರಾಟ ತಡೆಗೆ  ಡಿಪಿಡಿಪಿ ಕಾಯ್ದೆ ರಚನೆ: ರಾಜೀವ್‌ ಚಂದ್ರಶೇಖರ್

ಜನರ ಮಾಹಿತಿ ರಕ್ಷಣೆ, ಮಾರಾಟ ತಡೆಗೆ ಡಿಪಿಡಿಪಿ ಕಾಯ್ದೆ ರಚನೆ: ರಾಜೀವ್‌ ಚಂದ್ರಶೇಖರ್

Published : Aug 13, 2023, 04:06 PM ISTUpdated : Aug 13, 2023, 04:07 PM IST

ದೇಶದ ಪ್ರತಿಯೊಬ್ಬ ನಾಗರಿಕನ ಮಾಹಿತಿಯ ರಕ್ಷಣೆ ಮಾಡುವುದು ಹಾಗೂ ಮಾರಾಟ ಮಾಡುವುದನ್ನು ತಡೆಯಲು ‘ಡಿಜಿಟಲ್‌ ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾಯ್ದೆ’ ಜಾರಿಗೊಳಿಸಲಾಗಿದೆ.

ಬೆಂಗಳೂರು: ದೇಶದ ಪ್ರತಿಯೊಬ್ಬ ನಾಗರಿಕನ ಮಾಹಿತಿಯ ರಕ್ಷಣೆ ಮಾಡುವುದು ಹಾಗೂ ಮಾರಾಟ ಮಾಡುವುದನ್ನು ತಡೆಯಲು ‘ಡಿಜಿಟಲ್‌ ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾಯ್ದೆ’ (ಡಿಪಿಡಿಪಿ ಕಾಯ್ದೆ) ಜಾರಿಗೊಳಿಸಲಾಗಿದೆ. ಜನರ ಮಾಹಿತಿ ದುರುಪಯೋಗವಾಗದಂತೆ ತಡೆಯಲು ಬೇರೆ ದೇಶಗಳ ಕಾಯ್ದೆಯ ನೆರವು ಪಡೆಯದೆ ಭಾರತೀಯ ಕಾಯ್ದೆ ರಚಿಸಲಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಸಂಸದ ದಿವಸ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಡಿಜಿಟಲ್‌ ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾಯ್ದೆ’ ಕುರಿತು ವಿವರಿಸಿದರು.

ದೇಶದ ಪ್ರತಿಯೊಬ್ಬ ಪ್ರಜೆಯ ಮಾಹಿತಿಯನ್ನೂ ಸಂರಕ್ಷಿಸುವ ಸಲುವಾಗಿ ಡಿಪಿಡಿಪಿ ಕಾಯ್ದೆ ರೂಪಿಸಲಾಗಿದೆ. 2010ರಲ್ಲಿ ರಾಜ್ಯಸಭೆಯಲ್ಲಿ ನಾನು ಜನರ ಮಾಹಿತಿ ಸಂರಕ್ಷಣೆ ಕುರಿತಂತೆ ಖಾಸಗಿ ಬಿಲ್‌ ಮಂಡಿಸಿದ್ದೆ. ಆದರೆ, ಅಂದಿನ ಯುಪಿಎ ಸರ್ಕಾರ ಅದಕ್ಕೆ ಮಹತ್ವ ನೀಡಲಿಲ್ಲ. ಹೀಗಾಗಿ ಖಾಸಗಿತನ ಅಥವಾ ಮಾಹಿತಿ ಸಂರಕ್ಷಣೆಗೆ ಕಾಯ್ದೆ ರೂಪ ದೊರೆತಿರಲಿಲ್ಲ. ಅದಾದ ನಂತರ ದೆಹಲಿಯ ಕನೌಟ್‌ ಪ್ರದೇಶದ ಪಾಲಿಕೆ ಬಜಾರ್‌ನಲ್ಲಿ .50ಕ್ಕೆ ಜನರ ಮಾಹಿತಿ ಸೋರಿಕೆ ಮಾಡುವ ವಿಚಾರವನ್ನು ಸದನದ ಗಮನ ಸೆಳೆದಿದ್ದೆ. ಆಗಲೂ ಸರಿಯಾಗಿ ಪ್ರತಿಕ್ರಿಯೆ ದೊರೆತಿರಲಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆ ಮೇರೆಗೆ ‘ಡಿಜಿಟಲ್‌ ವೈಯಕ್ತಿಕ ಮಾಹಿತಿ ಸಂರಕ್ಷಣೆ ಕಾಯ್ದೆ’ ಅನುಷ್ಠಾನಗೊಳಿಸಲಾಗಿದೆ ಎಂದರು.

2019ರಲ್ಲಿ ಡಿಪಿಡಿಪಿ ಕಾಯ್ದೆಯ ಕರಡು ಪ್ರತಿ ರೂಪಿಸಿ ಪ್ರಕಟಿಸಲಾಗಿತ್ತು. ಆದರೆ, ಕೊರೋನಾ ಸೇರಿ ಇನ್ನಿತರ ಕಾರಣಗಳಿಂದಾಗಿ ಅಂತಿಮ ಕಾಯ್ದೆಗೆ ಒಪ್ಪಿಗೆ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಲೋಕಸಭೆ, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದು ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದು ನೋಟಿಫಿಕೇಷನ್‌ ಹೊರಡಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ತಂತ್ರಜ್ಞಾನ ಮತ್ತಷ್ಟುಅಭಿವೃದ್ಧಿ ಹೊಂದಲಿದೆ. ಆಗ ನಮ್ಮ ಮಾಹಿತಿಯ ರಕ್ಷಣೆ ಮತ್ತಷ್ಟುಕಠಿಣವಾಗಲಿದೆ. ಆದರೆ, ಡಿಪಿಡಿಪಿ ಕಾಯ್ದೆಯಿಂದಾಗಿ ಪ್ರತಿಯೊಬ್ಬ ನಾಗರಿಕನ ಮಾಹಿತಿಯೂ ಸುರಕ್ಷಿತವಾಗಿರಲಿದೆ ಎಂದು ಹೇಳಿದರು.
 
ಡಿಪಿಡಿಪಿ ಕಾಯ್ದೆಯಂತೆ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ಗಳು ಜನರ ಮಾಹಿತಿ ಸಂಗ್ರಹಿಸಿದ ನಂತರ ಅದನ್ನು ಬೇರೆಯವರಿಗೆ ನೀಡದಂತೆ ನಿರ್ಬಂಧ ಹೇರಲಾಗುತ್ತದೆ. ಜತೆಗೆ ಸೇವೆ ನೀಡಿದ ನಂತರ ಜನರ ಮಾಹಿತಿಯನ್ನು ಅಳಿಸಿ ಹಾಕಬೇಕು, ಯಾವ ವಿಚಾರಕ್ಕೆ ಮಾಹಿತಿ ಪಡೆಯಲಾಗುತ್ತದೆಯೇ ಅಷ್ಟಕ್ಕೆ ಮಾತ್ರ ಅದನ್ನು ಬಳಸಬೇಕು ಹಾಗೂ ಎಷ್ಟುಬೇಕೋ ಅಷ್ಟುಮಾಹಿತಿಯನ್ನು ಮಾತ್ರ ಸಂಗ್ರಹಿಸಬೇಕು ಎಂಬ ನಿರ್ಬಂಧ ವಿಧಿಸಲಾಗುತ್ತದೆ. ಒಂದು ವೇಳೆ ಕಾಯ್ದೆಯಲ್ಲಿನ ಅಂಶಗಳನ್ನು ಉಲ್ಲಂಘಿಸಿ ಜನರ ಮಾಹಿತಿ ಸೋರಿಕೆ ಮಾಡಿದರೆ ಸಂಸ್ಥೆಗೆ .250 ಕೋಟಿ ದಂಡ ವಿಧಿಸಲು ಅವಕಾಶವಿದೆ ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ಸಾರ್ವಜನಿಕರು ತಮ್ಮ ಮಾಹಿತಿ ಸೋರಿಕೆಯಾದ ಕುರಿತು ಡೇಟಾ ಪ್ರೊಟೆಕ್ಷನ್‌ ಬೋರ್ಡ್‌ನಲ್ಲಿ ದೂರು ದಾಖಲಿಸಬಹುದು. ಆ ದೂರನ್ನು ಬೋರ್ಡ್‌ ತನಿಖೆ ನಡೆಸಲಿದ್ದು, ಒಂದು ವೇಳೆ ಅಕ್ರಮ ಸಾಬೀತಾದರೆ ಭಾರೀ ದಂಡ ವಿಧಿಸಲಾಗುವುದು. ಎಷ್ಟುಮಾಹಿತಿ ಸೋರಿಕೆಯಾಗಿದೆಯೋ ಅಷ್ಟುಪ್ರಮಾಣದ ದಂಡ ವಿಧಿಸಲಾಗುತ್ತದೆ. ಅದು ಸರ್ಕಾರಿ ಸಂಸ್ಥೆಯಾಗಿರಬಹುದು ಅಥವಾ ಖಾಸಗಿ ಸಂಸ್ಥೆಯಾಗಿರಬಹುದು. ಎಲ್ಲ ರೀತಿಯ ಸಂಸ್ಥೆಗಳಿಗೂ ಒಂದೇ ರೀತಿಯ ದಂಡ ವಿಧಿಸಲಾಗುತ್ತದೆ ಎಂದು ವಿವರಿಸಿದರು.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!