ಮುಂಗಾರು ಪೂರ್ವ ಮಳೆ ಅಬ್ಬರಕ್ಕೆ ಮುಳುಗಿದ ಈಶಾನ್ಯ ರಾಜ್ಯಗಳು..!

May 20, 2022, 3:05 PM IST

ದೇಶದ ಈಶಾನ್ಯ (Eastern States) ಮತ್ತು ದಕ್ಷಿಣದ ರಾಜ್ಯಗಳಾದ ಅಸ್ಸಾಂ (Assam) ಮತ್ತು ಕೇರಳದಲ್ಲಿ (Kerala) ಮುಂಗಾರು ಪೂರ್ವ ಮಳೆ ಭಾರೀ ಅನಾಹುತ ಸೃಷ್ಟಿಸಿದ್ದು, ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.  ಕಳೆದೊಂದು ವಾರದಿಂದ ಈಶಾನ್ಯದ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಅರುಣಾಚಲಪ್ರದೇಶ, ತ್ರಿಪುರ, ಸಿಕ್ಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ. 

ರಾಜ್ಯದಲ್ಲಿ ಇನ್ನೂ 3 ದಿನ ಮಳೆ, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ರೆಡ್ ಅಲರ್ಟ್

ಈ ಪೈಕಿ ಅಸ್ಸಾಂ ಅತಿ ಹೆಚ್ಚು ತೊಂದರೆಗೆ ಒಳಗಾಗಿದ್ದು, ರಾಜ್ಯದ 33ರ ಪೈಕಿ 20ರಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಸುಮಾರು 2 ಲಕ್ಷ ಜನರು ಮಳೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. 33000 ಜನರಿಗೆ 55 ಪರಿಹಾರ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆ ಸಂಚಾರದ ಜೊತೆಗೆ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಕಾರಣ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. ನಲವು ಕಡೆ ಭೂ ಕುಸಿತಗಳು ಸಂಭವಿಸಿವೆ. ಈ ದುರ್ಘಟನೆಗಳಲ್ಲಿ 8 ಮಂದಿ ಸಾವನ್ನಪ್ಪಿದ್ದರೆ, 5 ಲಕ್ಷಕ್ಕೂ ಅಧಿಕ ಮಂದಿ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ಬ್ರಹ್ಮಪುತ್ರ ನದಿ ದಂಡೆಯಲ್ಲಿರುವ ಸುಮಾರು 1,500 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಬ್ರಹ್ಮಪುತ್ರಾ ನದಿ ನೀರು ಮತ್ತಷ್ಟುಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಹಾಜೋಯ್‌ನಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸುಮಾರು 2 ಸಾವಿರ ಮಂದಿಯನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. ಪ್ರವಾಹದಿಂದ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ಹೆಲಿಕಾಪ್ಟರ್‌ ಮುಖಾಂತರ ವಿತರಿಸಲಾಗಿದೆ.