Jun 27, 2020, 1:56 PM IST
ಬೆಂಗಳೂರು(ಜೂ.27): ಇನ್ನು ಮೂರು ದಿನಗಳ ಬಳಿಕ ಮೊದಲ ಹಂತದ ಅನ್‌ಲಾಕ್ ಮುಕ್ತಾಯವಾಗಲಿದ್ದು, ಎರಡನೇ ಹಂತದ ಅನ್‌ಲಾಕ್‌ಗೆ ಸಿದ್ದತೆ ಹಾಗೂ ಮಾರ್ಗಸೂಚಿಗಳು ರೆಡಿಯಾಗುತ್ತಿವೆ. ಎರಡನೇ ಹಂತದ ಅನ್‌ಲಾಕ್‌ನಲ್ಲಿ ಏನಿರತ್ತೆ? ಏನಿರಲ್ಲ? ಎನ್ನುವ ಕುತೂಹಲ ಜೋರಾಗಿದೆ.
ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಇದರ ಬೆನ್ನಲ್ಲೇ ಎರಡನೇ ಹಂತದ ಅನ್‌ಲಾಕ್ ಕುರಿತಂತೆ ಚರ್ಚೆಗಳು ಆರಂಭವಾಗಿವೆ. ಮೊದಲ ಅನ್‌ಲಾಕ್ ಇದೇ ಜೂನ್ 30ಕ್ಕೆ ಮುಕ್ತಾಯವಾಗಲಿದೆ.
ಪರೀಕ್ಷಾ ಕೇಂದ್ರದ ಪಕ್ಕದಲ್ಲಿರುವ ಗರ್ಭಿಣಿಗೆ ಕೋವಿಡ್ 19; ವಿದ್ಯಾರ್ಥಿಗಳಿಗೆ ಭಯ..ಭಯ..!
ಈಗಾಗಲೇ ಜಿಮ್, ಸ್ವಿಮ್ಮಿಂಗ್ ಫೂಲ್ ಹಾಗೂ ಚಿತ್ರಮಂದಿಗಳನ್ನು ಹೊರತುಪಡಸಿದ್ರೆ ಉಳಿದೆಲ್ಲಾ ಚಟುವಟಿಕೆಗಳು ಅನ್‌ಲಾಕ್ ಮಾಡಲಾಗಿದೆ. ಮೆಟ್ರೋ ಸೇವೆ ಆರಂಭ ಆಗುವುದು ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ. ಮತ್ತೇನೆಲ್ಲಾ ಇರಬಹುದು ಹಾಗೂ ಮತ್ತೇನು ಇರಲ್ಲ ಎನ್ನುವುದರ ಒಂದು ವಿಶ್ಲೇಷಣೆ ಇಲ್ಲಿದೆ ನೋಡಿ.