ವಕ್ಫ್‌ ಬೋರ್ಡ್‌ಗಳ ವಿಶೇಷ ಸ್ಥಾನಮಾನ ರದ್ದು ಮಾಡಲು ಕೇಂದ್ರದ ನಿರ್ಧಾರ!

Aug 7, 2024, 10:37 PM IST

ನವದೆಹಲಿ (ಆ.7): ಜಾತ್ಯಾತೀತ ರಾಷ್ಟ್ರ ಎನ್ನುವ ಮಾತಿಗೆ ಕಳಂಕ ಎನ್ನುವಂತಿದ್ದ ವಕ್ಫ್‌ ಕಾಯ್ದೆಯಲ್ಲಿ ಅಮೂಲಾಗ್ರಾ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಕ್ಫ್‌ ಬೋರ್ಡ್‌ನ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲಿದೆ.

ಮುಸ್ಲಿಂ ಧಾರ್ಮಿಕ ಸಂಸ್ಥೆಗಳ ಆಸ್ತಿಗಳನ್ನು ಕಾಪಾಡಲು ಇರುವ ಕಾನೂನು ವಕ್ಫ್‌ ಕಾಯ್ದೆ. 1954ರಲ್ಲಿ ನೆಹರು ಸರ್ಕಾರ ಈ ಕಾನೂನನ್ನು ಜಾರಿ ಮಾಡಿತ್ತು.. ಇದಕ್ಕೆ 1995ರಲ್ಲಿ ಪಿವಿ ನರಸಿಂಹರಾವ್‌ ಅವರು ಈ ಕಾಯ್ದೆಗೆ ದೊಡ್ಡ ತಿದ್ದುಪಡಿಯನ್ನು ತಂದಿದ್ದರು. ಅದರ ಅನ್ವಯ ದೇಶದ ಯಾವುದೇ ಜಾಗವನ್ನು ವಕ್ಫ್‌ ತನ್ನದು ಎಂದು ಘೋಷಣೆ ಮಾಡಿದಲ್ಲಿ, ಅದನ್ನು ಕೋರ್ಟ್‌ನಲ್ಲಿಯೂ ಪ್ರಶ್ನೆ ಮಾಡುವ ಹಾಗಿರಲಿಲ್ಲ. 1995ರಲ್ಲಿ ಈ ಕಾಯ್ದೆಗೆ 40ಕ್ಕೂ ಅಧಿಕ ತಿದ್ದುಪಡಿ ಮಾಡಲಾಗಿತ್ತು.

ಇಂಥ ತುಘ್ಲಕ್‌ ಕಾನೂನಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲಿದೆ. ಕೇಂದ್ರ ಸಚಿವ ಕಿರಣ್‌ ರಿಜಿಜು ಬೆಳಗ್ಗೆ 11 ಗಂಟೆಗೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಿದ್ದಾರೆ.