11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದ ಭೂಪ ... ಇಲ್ಲಿದೆ ಈ ವಾರದ ವೆರೈಟಿ ಸ್ಪೆಷಲ್ ನ್ಯೂಸ್‌ಗಳು

Jan 16, 2022, 2:44 PM IST

ಹಾವು ಎಂದರೆ ಎಲ್ಲರೂ ಹೆದರಿ ಮಾರು ದೂರು ಓಡ್ತಾರೆ. ಆದರೆ ಇಲ್ಲೊಬ್ಬರು ಉರಗ ತಜ್ಞರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಈ ಸರ್ಪ ಕಾಣಿಸಿಕೊಂಡಿತ್ತು. ಇದು ಕಾಳಿಂಗ ಸರ್ಪ ಎಂದು ತಿಳಿದ ಗ್ರಾಮದ ಜನ ಬೆಚ್ಚಿಬಿದ್ದಿದ್ದರು. 

ಒಂದೇ ದಿನ ಎದುರಾದ ಎರಡೆರಡು ಅಪಘಾತಗಳಿಂದ ಯುವಕನೊರ್ವ ಎಸ್ಕೇಪ್‌ ಆದ ಘಟನೆ ಮಂಗಳೂರಿನಲ್ಲಿ ನಡೆದಿತ್ತು. ಅದರ ದೃಶ್ಯವೂ ಈ ವಿಡಿಯೋದಲ್ಲಿದೆ.  ಇನ್ನು ಹಾವಿನೊಂದಿಗೆ 3 ವರ್ಷದ ಬಾಲಕೋರ್ವ ಆಟವಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊಡಪಾನದೊಳಗಿದ್ದ ಹಾವನ್ನು ಬಾಲಕ ಇಮ್ರಾನ್‌ ಕೈ ಹಾಕಿ ಹಿಡಿದು ಅದರೊಂದಿಗೆ ಆಟವಾಡಿದ್ದಾನೆ. ಇನ್ನು ಐದು ವರ್ಷದಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ಕೋವ್ಯಾಕ್ಸಿನ್‌ ಪಡೆದ ಬಳಿಕ ಎದ್ದು ಓಡಾಡಿದ, ಮಾತನಾಡಲು ಶುರು ಮಾಡಿದ ಘಟನೆ ನಡೆದಿದೆ. ಜಾರ್ಖಂಡ್‌ನ ಬೊಕಾರೋದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಹೆಬ್ಬಾವು ರಸ್ತೆ ದಾಟಲು ಕಾದ ವಾಹನ ಸವಾರರು... ಫುಲ್ ಟ್ರಾಫಿಕ್‌ ಜಾಮ್‌