Sep 21, 2021, 4:34 PM IST
ಬೆಂಗಳೂರು(ಸೆ. 21) ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.
ಜಿತೇಂದರ್ ಸಿಂಗ್ ಮೂಲತಃ ರಾಜಸ್ಥಾನದ ಬಾಡ್ಮೇರ್ ಜಿಲ್ಲೆಯವನಾಗಿದ್ದಾನೆ. ಕಳೆದ ಎರಡೂವರೆ ವರ್ಷಗಳಿಂದ ನಗರದಲ್ಲಿ ಬಟ್ಟೆವ್ಯಾಪಾರ ಮಾಡುತ್ತಿದ್ದ. ರಸ್ತೆ ಬದಿ ಬಟ್ಟೆವ್ಯಾಪಾರ ಮಾಡುವವರಿಗೆ ಸಗಟು ದರದಲ್ಲಿ ಬಟ್ಟೆಒದಗಿಸುತ್ತಿದ್ದ. ಈತನಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಹೆಚ್ಚಾಗಿ ಬಳಸುವ ಚಟ ಇತ್ತು. ಯುವತಿಯರಿಗೆ ಫೇಸ್‌ಬುಕ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಬಳಿಕ ತಾನು ಸೇನಾ ಅಧಿಕಾರಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡು ಚಾಟ್ ಮಾಡುತ್ತಿದ್ದ.
ಪ್ರಾಯಶಃ ತನಗೆ ತಿಳಿಯದೆಯೇ ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ, ದೇಶದ ಭದ್ರತೆ ಬಗ್ಗೆ ಎಚ್ಚರಿಕೆ ವಹಿಸದೆ ಸೂಕ್ಷ್ಮ ಸೇನಾ ನೆಲೆಗಳ ವಿವರವನ್ನು ಶತ್ರುದೇಶಕ್ಕೆ ನೀಡಿದ ಬೆಂಗಳೂರಿನ ಕಾಟನ್‌ಪೇಟೆ ನಿವಾಸಿ, ಸಗಟು ವಸ್ತ್ರ ವ್ಯಾಪಾರಿ ಜಿತೇಂದರ್ ಸಿಂಗ್ ಎಂಬಾತನ ‘ಹನಿಟ್ರ್ಯಾಪ್’ ಕತೆಯಿದು.