ಫೆಬ್ರವರಿ ತಿಂಗಳಿನಲ್ಲಿ 3 ಬಾರಿ ಸಿಲಿಂಡರ್ ದರ ಹೆಚ್ಚಳವಾಗಿ, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಇಂದು ಮತ್ತೆ 25 ರೂ ಹೆಚ್ಚಳವಾಗಿದೆ. 797 ಇದ್ದ ಗ್ಯಾಸ್ ಸಿಲಿಂಡರ್ ದರ 822 ಕ್ಕೆ ಏರಿಕೆಯಾಗಿದೆ.
ಬೆಂಗಳೂರು (ಮಾ. 01): ಫೆಬ್ರವರಿ ತಿಂಗಳಿನಲ್ಲಿ 3 ಬಾರಿ ಸಿಲಿಂಡರ್ ದರ ಹೆಚ್ಚಳವಾಗಿ, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಇಂದು ಮತ್ತೆ 25 ರೂ ಹೆಚ್ಚಳವಾಗಿದೆ. 797 ಇದ್ದ ಗ್ಯಾಸ್ ಸಿಲಿಂಡರ್ ದರ 822 ಕ್ಕೆ ಏರಿಕೆಯಾಗಿದೆ. ಇದು ನಾಲ್ಕನೇ ಬಾರಿ ಏರಿಕೆಯಾಗುತ್ತಿರುವುದು. ಡಿಸಂಬರ್‌ನಿಂದ ಇಲ್ಲಿಯವರೆಗೆ ಒಟ್ಟು 250 ರೂ ಏರಿಕೆಯಾದಂತಾಗಿದೆ.