News Hour: ಸಂಸದೀಯ ಇತಿಹಾಸದಲ್ಲೇ ಅತಿದೊಡ್ಡ ಭದ್ರತಾ ಲೋಪ, ದಾಳಿಕೋರರಿಗೆ ಮೈಸೂರು ಲಿಂಕ್‌!

Dec 13, 2023, 11:22 PM IST

ಬೆಂಗಳೂರು (ಡಿ.13): ಸಂಸತ್‌ನ ಇತಿಹಾಸದಲ್ಲೇ ಕಂಡು ಕೇಳರಿಯದ ಭದ್ರತಾ ವೈಫಲ್ಯ ಬುಧವಾರ ನಡೆದಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದಾಗಲೇ ಇಬ್ಬರು ಆಗುಂತಕರು ದಾಳಿ ನಡೆಸಿದ್ದಾರೆ. ಗ್ಯಾಲರಿಯಿಂದ ಕಲಾಪಕ್ಕೆ ಧುಮಿಕಿ ದಾಳಿಕೋರರು ಆತಂಕ ಸೃಷ್ಟಿಸಿದ್ದರು.

ಸಂಸದರು ಕೂರುವ ಚೇರ್,ಟೇಬಲ್‌ಗಳ ಮೇಲೆ ದಾಳಿಕೋರ ಓಡಾಡಿದ್ದಾನೆ. ಕಲಾಪದಲ್ಲಿ ಸ್ಮೋಕ್ ಬಾಂಬ್ ಸ್ಪೋಟಿಸಿ ಆತಂಕಕ ಸೃಷ್ಟಿಸಿದ್ದ. ದಾಳಿಕೋರನನ್ನು ಸಂಸದರು ಮತ್ತು ಲೋಕಸಭಾ ಸಿಬ್ಬಂದಿ ಸುತ್ತುವರಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲೋಕಸಭಾ ಗ್ಯಾಲರಿಯಲ್ಲಿದ್ದ ಮತ್ತೊಬ್ಬನಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾನೆ. ತಕ್ಷಣವೇ ದಾಳಿ ಮಾಡಿದ ಇಬ್ಬರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದಾರೆ.

ಧಾರ್ಮಿಕ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ನಿಷೇಧ, ಮಧ್ಯಪ್ರದೇಶ ಸಿಎಂ ಆದೇಶ

ಹೊಸ ಸಂಸತ್ ಭವನದ ಹೊರಗೂ ಕೂಡ ಇಬ್ಬರು ಆತಂಕ ಸೃಷ್ಟಿಸಿದ್ದರು. ಸ್ಮೋಕ್ ಬಾಂಬ್ ಸಿಡಿಸಿ ಸಂಸತ್ ಮುಂದೆ ಆತಂಕ ಸೃಷ್ಟಿಸಿದ ಆರೋಪಿಗಳು ಸಂಸತ್‌ನ ಒಳಗೆ ಇಬ್ಬರು, ಹೊರಗೆ ಇಬ್ಬರು ಒಟ್ಟು ಒಟ್ಟು ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆ ಅಧಿಕಾರಿಗಳಿಂದ ಆರೋಪಿಗಳ ವಿಚಾರಣೆ. 3 ಗಂಟೆಗೂ ಹೆಚ್ಚು ಕಾಲ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು ದಾಳಿಕೋರರ ಉದ್ದೇಶ ಏನು..? ಹಿನ್ನೆಲೆ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.