
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ, ಬಂಗಾಳದಲ್ಲಿ ಇತಿಹಾಸ ಎನ್ನುತ್ತಿದೆ ಸಮೀಕ್ಷೆ, ಪೋಲ್ ಆಫ್ ಫೋಲ್ಸ್ ಪ್ರಕಾರ ಎನ್‌ಡಿಎಗೆ 370 ಸ್ಥಾನ, ಚುನಾವಣಾ ತಂತ್ರಗಾರರ ಸಮೀಕ್ಷೆ ಅಂಕಿ ಸಂಖ್ಯೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ದಕ್ಷಿಣ ಭಾರತ ಹಾಗೂ ಪೂರ್ವ ಭಾಗದ ರಾಜ್ಯಗಳಲ್ಲಿ ಬಿಜೆಪಿ ಇತಿಹಾಸ ರಚಿಸಲಿದೆ. ಇದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಸಂಖ್ಯೆ ಏರಿಕೆ ಕಾಣಲಿದೆ ಎಂದು ಚುನಾವಣಾ ತಂತ್ರಗಾರರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮತಗಟ್ಟೆ ಸಮೀಕ್ಷೆಗಳು ಇದೇ ಅಂಕಿ ಸಂಖ್ಯೆಯನ್ನು ನೀಡಿದೆ. ತಮಿಳುನಾಡು, ಕೇರಳದಲ್ಲಿ ಕಮಲ ಅರಳಲಿದೆ ಎಂದಿದ್ದರೆ, ತೆಲಂಗಾಣ,ಆಂಧ್ರ ಪ್ರದೇಶದಲ್ಲಿ ಸ್ಥಾನ ಹೆಚ್ಚಿಸಿಕೊಳ್ಳಲಿದೆ ಎಂದಿದೆ. ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆಯ 10 ಪ್ರಮುಖ ವರದಿಯನ್ನು ಒಟ್ಟುಗೂಡಿಸಿದ ಪೋಲ್ ಆಫ್ ಪೋಲ್ ಪ್ರಕಾರ ಎನ್‌ಡಿಎ 370 ಸ್ಥಾನ ಗೆಲ್ಲಲಿದೆ ಎನ್ನುತ್ತಿದೆ. ಇನ್ನು ಇಂಡಿಯಾ ಒಕ್ಕೂಟ 150ರ ಅಸುಪಾಸು ಎಂದಿದೆ.