script type="application/ld+json"> { "@context": "https://schema.org", "@type": "WebSite", "name": "Asianet Suvarna News", "url": "https://kannada.asianetnews.com", "potentialAction": { "@type": "SearchAction", "target": "https://kannada.asianetnews.com/search?topic={search_term_string}", "query-input": "required name=search_term_string" } }

ಲೋಕಸಭಾ ಚುನಾವಣೆಗೆ ಕೌಂಟ್ಡೌನ್: ಸುಡು ಸುಡು ಕೆಂಡದಂಥ ಬಿಸಿಲಲ್ಲೇ ಎಲೆಕ್ಷನ್ ಕ್ಯಾಂಪೇನ್

Apr 9, 2024, 4:24 PM IST


ಈ ವರ್ಷದ ಬೇಸಗೆಯ ತಾಪಮಾನ ಈ ಹಿಂದೆಂದಿಗಿಂತಲೂ ಅಧಿಕವಾಗಿದ್ದು, ಚುನಾವಣಾ ಪ್ರಚಾರದ ಭರಾಟೆಯಲ್ಲಿರುವ ರಾಜಕೀಯ ನಾಯಕರಿಗೆ ಈ ಬಿಸಿಲಿನ ಝಳ ವ್ಯಾಪಕವಾಗಿ ತಟ್ಟುತ್ತಿದೆ. ನೆಲ ಆಕಾಶ ಎರಡು ಬಿಸಿಲಿನ ಕೆಂಡ ಕಾರುತ್ತಿದ್ದು, ದಣಿವಾರಿಸಿಕೊಳ್ಳಲು ಪಕ್ಷಗಳ ಕಾರ್ಯಕರ್ತರು ಹರಸಾಹಸಪಡುತ್ತಿದ್ದಾರೆ. ಲೋಕ ಸಮರ ಗೆಲ್ಲಲು ಸರ್ವ ಪಕ್ಷಗಳ ಕಸರತ್ತು ಮಾಡುತ್ತಿದ್ದು, ಸುಡು ಬಿಸಿಲಿನ ನಡುವೆಯೇ ಪ್ರಚಾರ ಮಾಡುತ್ತಾ ಬಳಲಿ ಬೆಂಡಾಗುತ್ತಿದ್ದಾರೆ. ಈ ಬಗ್ಗೆ ಒಂದು ಡಿಟೇಲ್‌ ಸ್ಟೋರಿ ವೀಕ್ಷಿಸಿ ಕೆಂಡದ ಮಳೆಯಲ್ಲಿ ಇಲೆಕ್ಷನ್ ಕ್ಯಾಂಪೇನ್..

18ನೇ ಲೋಕಸಭೆಗೆ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.  ಮೊದಲ ಹಂತ ಏಪ್ರಿಲ್‌ 26 (ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್​), 2ನೇ ಹಂತದ ಚುನಾವಣೆ ಮೇ 7 (ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು  ಬೀದರ್‌) ರಂದು ನಡೆಯಲಿದೆ. ಫಲಿತಾಂಶ ಜೂನ್‌ 4ಕ್ಕೆ ಪ್ರಕಟವಾಗಲಿದೆ.