Oct 2, 2020, 11:08 AM IST
ನವದೆಹಲಿ (ಅ. 02): ಬಿಜೆಪಿ ಭೀಷ್ಮ ಎಲ್‌ಕೆ ಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಜೀವಮಾನದ ಅಗ್ನಿಪರೀಕ್ಷೆ ಗೆದ್ದಿದ್ದಾರೆ. 32 ಜನರನ್ನು ಲಕ್ನೋ ವಿಶೇಷ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಈ ತೀರ್ಪಿನೊಂದಿಗೆ ಬಾಬ್ರಿ ಮಸೀದಿ, ಅಯೋಧ್ಯಾ ವಿವಾದದ ಅಷ್ಟೂ ಪ್ರಕರಣಗಳು ಮುಗಿದಂತಾಗಿದೆ.
ವ್ಯವಸ್ಥಿತ ಸಂಚು ರೂಪಿಸಿ ಬಾಬ್ರಿ ಮಸೀದಿಯನ್ನು ಕೆಡವಲಿಲ್ಲ. ಆ ಕ್ಷಣದ ಕಾರ್ಯಕರ್ತರ ಕೋಪಕ್ಕೆ ಮಸೀದಿ ತುತ್ತಾಯಿತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ತೀರ್ಪಿನ ಬಗ್ಗೆ ಮುಸ್ಲಿಂ ಲೀಗ್ ಅಪಸ್ವರ ಎತ್ತಿದೆ. ಇಡೀ ಪ್ರಕರಣದ ಬಗ್ಗೆ ಸುವರ್ಣ ನ್ಯೂಸ್ ಡಿಬೆಟ್‌ನಲ್ಲಿ ಬೇರೆ ಬೇರೆ ಅಭಿಪ್ರಾಯಗಳು ದಾಖಲಾದವು. ಚರ್ಚೆಯ ಒಂದು ಭಾಗ ಇಲ್ಲಿದೆ ನೋಡಿ..!
ಬಾಬ್ರಿ ಮಸೀದಿ ಕೆಡವಿದ್ದು ಸತ್ಯ, ಕುತಂತ್ರ ಸುಳ್ಳು; ನ್ಯಾಯಾಲಯದ ತೀರ್ಪಿಗೆ ಮುಸ್ಲಿಂ ಲೀಗ್ ಅಪಸ್ವರ