ರೈಲನ್ನು ಹತ್ತುವಾಗ, ಇಳಿಯುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಅಜಾಗರೂಕತೆ ಮಾಡಿದರೆ ಪ್ರಾಂಕ್ಕೆ ಅಪಾಯ ತರಬಹುದು. ಇಲ್ಲೊಬ್ಬ ಮಹಿಳೆ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ.
ಮುಂಬೈ (ನ. 27): ರೈಲನ್ನು ಹತ್ತುವಾಗ, ಇಳಿಯುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಅಜಾಗರೂಕತೆ ಮಾಡಿದರೆ ಪ್ರಾಂಕ್ಕೆ ಅಪಾಯ ತರಬಹುದು. ಇಲ್ಲೊಬ್ಬ ಮಹಿಳೆ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಈ ದೃಶ್ಯವನ್ನು ಕಂಡ RPF ಮಹಿಳಾ ಸಿಬ್ಬಂದಿ ಕೂಡಲೇ ಹೋಗಿ ಮಹಿಳೆಯ ಜೀವ ಉಳಿಸಿದರು. ಮುಂಬೈನ ಬೈಕೋಲ ರೈಲು ನಿಲ್ದಾಣದಲ್ಲಿ ನಡೆದ ಘಟನೆ ಇದು. ಸಪ್ನಾ ಗೋಲ್ಕರ್, ಜೀವ ಉಳಿಸಿದ ಆರ್‌ಪಿಎಫ್ ಮಹಿಳಾ ಸಿಬ್ಬಂದಿ. ಇವರ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.