ದೆಹಲಿ ದಂಗೆ : 5 ತಿಂಗಳ ಹಿಂದೆಯೇ ಸ್ಕೆಚ್ ನಡೆಸಿತ್ತಾ ಖಲೀಸ್ತಾನ...?

Jan 27, 2021, 11:29 AM IST

ನವದೆಹಲಿ (ಜ. 27): ಕೇಂದ್ರ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ನಡೆಸಿದ ಹೋರಾಟ ಹಿಂಸಾಚಾರದ ಮೂಲಕ ಅರಾಜಕತೆಯ ಹಾದಿಗೆ ತಿರುಗಿದೆ. ಇದರೊಂದಿಗೆ ಕಳೆದ 60 ದಿನಗಳಿಂದ ಶಾಂತಿಯುತವಾಗಿ ನಡೆಸುತ್ತಿದ್ದ ಹೋರಾಟ ಅರ್ಥ ಕಳೆದುಕೊಂಡು, ಟೀಕೆಗೆ ಗುರಿಯಾಗಿದೆ. ಪ್ರತಿಭಟನಾಕಾರರು ದೆಹಲಿಯ ಐತಿಹಾಸಿಕ ಕೆಂಪುಕೋಟೆಗೆ ಲಗ್ಗೆ ಹಾಕಿ ಸಿಖ್ ಧಾರ್ಮಿಕ ಧ್ವಜವನ್ನು ಹಾರಿಸಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. 

60 ದಿನಗಳ ಶಾಂತಿಯುತ ರೈತ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದಿದ್ದೇಗೆ..?

ರೈತ ಸಂಘಟನೆಗಳ ಜೊತೆ ಇತರ ಸಂಘಟನೆಗಳು, ಅನ್ಯ ಹಿತಾಸಕ್ತಿಗಳು ಶಾಮೀಲಾಗಿರುವ ಶಂಕೆ ದಟ್ಟವಾಗಿದೆ. ಇದು ರೈತ ಹೋರಾಟವಲ್ಲ ಎಂಬ ವಾದಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ. ಹಾಗಾದರೆ ಈ ಗಲಭೆಯ ಹಿಂದಿನ ಶಕ್ತಿ ಯಾರು..? ಇದು ಪೂರ್ವನಿಯೋಜಿತವೇ..?