ಕಚ್ಚತೀವು ವಿವಾದದಲ್ಲಿ ಬಸವಳಿದ ಕಾಂಗ್ರೆಸ್-ಡಿಎಂಕೆ, ತಮಿಳುನಾಡಿನಲ್ಲಿ ಬದಲಾಗುತ್ತಾ ಇತಿಹಾಸ?

Apr 1, 2024, 11:24 PM IST

ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ಬಳಸಿರುವ ಕಚ್ಚತೀವು ದ್ವೀಪ ಅಸ್ತ್ರ ಕಾಂಗ್ರೆಸ್ ಹಾಗೂ ಡಿಎಂಕೆಗೆ ಭಾರಿ ತಲೆನೋವು ತಂದಿದೆ. 1974ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಈ ದ್ವೀಪವನ್ನು ಶ್ರೀಲಂಕಾಗೆ ನೀಡಿದರು. ಭಾರತದ ಅಂಗವಾಗಿದ್ದ ಈ ದ್ವೀಪ ಲಂಕಾಗೆ ನೀಡಿ ಭಾರತಕ್ಕೆ ದ್ರೋಹ ಬಗೆದಿದ್ದಾರೆ. ಈ ದ್ವೀಪ ಕೈತಪ್ಪಿದ ಕಾರಣ ತಮಿಳುನಾಡು ಮೀನುಗಾರರ ಹೈರಣಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಕಚ್ಚತೀವು ದ್ವೀಪದ ಅಧಿಕೃತ ಆರ್‌ಟಿಐ ಮಾಹಿತಿ ಕೋಲಾಹಲವನ್ನೇ ಸೃಷ್ಟಿಸಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ಝಳಪಿಸಿರುವ ಈ ಅಸ್ತ್ರ ಕಾಂಗ್ರೆಸ್ ಹಾಗೂ ಡಿಎಂಕೆ ತಲೆನೋವಾಗಿದೆ. ಇದು ತಮಿಳುನಾಡಿನಲ್ಲಿ ಬಿಜೆಪಿಗೆ ಹೊಸ ತಿರುವು ಕೊಡುತ್ತಾ?  ಏನಿದು ಕಚ್ಚತೀವು ದ್ವೀಪ?