Asianet Exclusive ಜಗತ್ತು ನಿಬ್ಬೆರಗಾಗೋ ಯೋಜನೆಗಳ ಲಿಸ್ಟ್‌ ವಿವರಿಸಿದ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌!

Sep 21, 2023, 9:47 PM IST

ಬೆಂಗಳೂರು (ಸೆ.21): ದೇಶದ ಹೆಮ್ಮೆ ಭಾರತೀಯ ಬಾಹ್ಯಾಕಾಶ ಸಂಸ್ಥೆ, ಅಂದ್ರೆ ಇಸ್ರೋ. ಚಂದ್ರಯಾನ-3 ಅಭೂತಪೂರ್ವ ಯಶಸ್ಸಿನ ನಂತರ ಇಡೀ ಜಗತ್ತೇ ಭಾರತದತ್ತ ಇಸ್ರೋ ಸಂಸ್ಥೆಯತ್ತ ನೋಡುತ್ತಿದೆ. ಜಗತ್ತಿನ ಬಲಾಢ್ಯ ಮೂರು ದೇಶಗಳಷ್ಟೇ ಮಾಡಿದ್ದ ಸಾಧನೆಯನ್ನ ಇವತ್ತು ಭಾರತ ಸಾಧ್ಯವಾಗಿಸಿದೆ. ಅದರಲ್ಲೂ ಚಂದ್ರನ ದಕ್ಷಿಣ ಧೃವದಂತ ಬಹುದೊಡ್ಡ ಸವಾಲಿನ ವಾತಾವರಣದಲ್ಲಿ ಲ್ಯಾಂಡರ್ ಇಳಿಸಿದ ಮೊಟ್ಟ ಮೊದಲ ದೇಶ ಭಾರತ. ಈ ಸಾಧನೆಗೆ ಕಾರಣವಾಗಿದ್ದು ಇಸ್ರೋ ವಿಜ್ಞಾನಿಗಳ ಪರಿಶ್ರಮ.

ದ್ರಯಾನ 3 ಯೋಜನೆ ಯಶಸ್ವಿಯಾದ ನಂತರ ಇಸ್ರೋ ಸಂಸ್ಥೆ, ಇಸ್ರೋ ವಿಜ್ಞಾನಿಗಳ ಸಾಧನೆ ಬಗ್ಗೆ ದೇಶದ ಮನೆ ಮನೆಯಲ್ಲೂ ಚರ್ಚೆಗಳು ನಡೆಯುತ್ತಿವೆ. ಇಸ್ರೋ ಮುಂದೆ ಇನ್ನೇನು ಮಾಡಲಿದೆ ಅನ್ನೋ ಕುತೂಹಲಗಳಿವೆ... ಈ ನಿಟ್ಟಿನಲ್ಲಿ ಏಷ್ಯಾನೆಟ್ ನ್ಯೂಸ್ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರ ಎಕ್ಸ್‌ಕ್ಲೂಸಿವ್‌ ಸಂದರ್ಶನ ನಡೆಸಿದೆ.

ಭಾರತ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವ ದಿನ ದೂರವಿಲ್ಲ!

ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಗ್ರೂಪ್‌ ಎಕ್ಸಿಕ್ಯೂಟೀವ್ ಚೇರ್ಮನ್ ರಾಜೇಶ್ ಕಾಲ್ರಾ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಜತೆ ಸಂದರ್ಶನ ನಡೆಸಿದ್ದಾರೆ. ಚಂದ್ರಯಾನದ ಸಾಧನೆ ಹೇಗಾಯ್ತು..? ಆದಿತ್ಯ ಎಲ್ 1 ಯೋಜನೆ ಮತ್ತು ಭವಿಷ್ಯದಲ್ಲಿ ಇಸ್ರೋ ಕೈಗೊಳ್ಳಲಿರೋ ಮಹತ್ವಾಕಾಂಕ್ಷೆ ಯೋಜನೆಗಳ ಬಗ್ಗೆ ಅಧ್ಯಕ್ಷ ಎಸ್. ಸೋಮನಾಥ್ ವಿವರವಾಗಿ ಮಾತನಾಡಿದ್ದಾರೆ...