Jul 14, 2022, 10:52 PM IST
ನವದೆಹಲಿ (ಜು. 14): ಪ್ರಧಾನಿ ಮೋದಿ (PM Narendra Modi) ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು (Terrorists) ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ 8 ಪುಟಗಳ ದಾಖಲೆಗಳು ಸಿಕ್ಕಿದ್ದು ಅದರಲ್ಲಿ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಬಿಹಾರದ ಪಾಟ್ನಾದಲ್ಲಿ ಮೋದಿ ಗುರಿಯಾಗಿಸಿ ಸಂಚು ರೂಪಿಸಿದ್ದ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 12ರಂದು ಪ್ರಧಾನಿ ಮೋದಿ ಪಾಟ್ನಾ ಪ್ರವಾಸದಲ್ಲಿದ್ದರು. ಅಂದೇ ಪ್ರಧಾನಿಯನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.
ಮೊಹಮ್ಮದ್ ಜಲಾವುದ್ದೀನ್ ಹಾಗೂ ಅಥರ್ ಪರ್ವೇಜ್ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 8 ಪುಟಗಳ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇದರಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಜಲಾವುದ್ದೀನ್ ಜಾರ್ಖಂಡ್ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇವರಿಬ್ಬರೂ ಸಹ ಪಿಎಫ್ಐ ಹಾಗೂ ಎಸ್‌ಡಿಪಿಐನ ಸಕ್ರಿಯ ಸದಸ್ಯರಾಗಿದ್ದರು.
ಇದನ್ನೂ ನೋಡಿ: ಹೊಸ ಸಂಸತ್ತಿನ ನೆತ್ತಿಯಲ್ಲಿ ಸಿಂಹ ಘರ್ಜನೆ: ಮೂಲ ಲಾಂಛನ ವಿರೂಪಗೊಳಿಸಿತಾ ಮೋದಿ ಸರ್ಕಾರ?
ಅಲ್ಲದೇ ಜಲಾಲುದ್ದೀನ್ ತನ್ನ ಮನೆಯಲ್ಲಿಯೇ ಪಿಎಸ್ಐ ಕಚೇರಿ ಹೊಂದಿದ್ದನು. ಇವರು ಪ್ರಧಾನಿ ಮೋದಿ ಪ್ರವಾಸಕ್ಕೂ ಮುನ್ನ 15 ದಿನಗಳ ಹಿಂದಷ್ಟೇ ನುರಿತ ಉಗ್ರರಿಂದ ಟ್ರೈನಿಂಗ್ ಪಡೆದಿದ್ದರು ಎನ್ನಲಾಗ್ತಿದೆ. ಬಂಧಿತರ ಬಳಿ ಕೆಲವು ಮಹತ್ವದ ದಾಖಲೆಗಳು ಸಿಕ್ಕಿದ್ದು, ಅದರಲ್ಲಿ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಬೇಕೆಂಬುದರ ಬಗ್ಗೆ ಬರೆಯಲಾಗಿದೆ. ಬಿಹಾರ ಪೊಲೀಸರು ನೀಡಿರುವ ಮಾಹಿತಿ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ಎನ್‌ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.