ಬೆಂಗಳೂರು ಗಲಭೆ ಹಿಂದೆ ರಾಮ ರಹಸ್ಯ; ಗಲಾಟೆ ಎಬ್ಬಿಸಲು ಮೊದಲೇ ಸ್ಕೆಚ್?

Aug 14, 2020, 7:03 PM IST

ಬೆಂಗಳೂರು (ಆ. 14): ರಾಜಧಾನಿಯ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆಗೆ ಮುನ್ನ ಮೂರು ಬಾರಿ ನಗರದಲ್ಲಿ ದೊಂಬಿ ಸೃಷ್ಟಿಸಲು ಎಸ್‌ಡಿಪಿಐ ಮುಖಂಡರ ಸಂಚು ರೂಪಿಸಿದ್ದರು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 

2019 ರ ಅಕ್ಟೋಬರ್‌ನಲ್ಲಿ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಆ ವೇಳೆ ಶಾಂತಿ ಭಂಗಕ್ಕೆ ಎಸ್‌ಡಿಪಿಐ ಮುಖಂಡರು ಸಂಚು ರೂಪಿಸಿದ್ದರು. ಆದರೆ ಪೊಲೀಸರ ಕಠಿಣ ಕ್ರಮಗಳ ಪರಿಣಾಮ ಪೂರ್ವ ಯೋಜಿತ ಸಂಚು ಕಾರ್ಯಗತವಾಗಿಲ್ಲ. ಇದಾದ ನಂತರ ಅದೇ ತಂಡ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನ ವಿರೋಧಿ ಹೋರಾಟದ ವೇಳೆ ಗಲಭೆ ನಡೆಸಲು ಮತ್ತೊಂದು ಬಾರಿ ಯತ್ನ ನಡೆದಿತ್ತು.

ಬೆಂಗಳೂರು ಗಲಭೆ: ನನಗೆ 3 ಕೋಟಿ ರೂ ನಷ್ಟವಾಗಿದೆ ಎಂದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಇತ್ತೀಚೆಗೆ ಆ.5 ರಂದು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವಿರೋಧಿಸಿ ಗಲಭೆ ನಡೆಸಲು ತಂಡ ಯೋಜಿಸಿತ್ತು. ಆಗ ಸೂಕ್ಷ್ಮಪ್ರದೇಶವಾದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಂದೋಬಸ್‌್ತ ಕಲ್ಪಿಸಿದ್ದರು. ಹೀಗಾಗಿ ಮೂರನೇ ಬಾರಿಯೂ ಯೋಜನೆ ವಿಫಲವಾಗಿದ್ದರಿಂದ ಮುಜಾಮಿಲ್‌ ಹಾಗೂ ಅಯಾಜ್‌, ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಕುರಿತು ನವೀನ್‌ ಹಾಕಿದ್ದ ವಿವಾದಾತ್ಮಕ ಪೋಸ್ಟ್‌ ಅನ್ನು ದಾಳವಾಗಿ ಬಳಸಿಕೊಂಡಿದ್ದಾರೆæ ಎಂದು ಪೊಲೀಸರು ಸಂಶಯಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!