ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕೇಂದ್ರ ಸರ್ಕಾರ ನೀಡುವ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿಯನ್ನು 29 ಸಾಧಕ ಮಹಿಳೆಯರಿಗೆ ನೀಡಲಾಗಿದೆ. ಮಹಿಳಾ ದಿನದಂದು(ಮಾ.08) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಸಸ್ತಿ ವಿತರಿಸಲಿದ್ದಾರೆ. ಇನ್ನು ಪುರಸ್ಕಾರ ಆಯ್ಕೆಯಾಗಿರುವ ಮಹಿಳಾ ಸಾಧಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಈ ವೇಳೆ ಭಾರತದ ಮೊದಲ ನೇವಿ ಮಹಿಳಾ ಕ್ಯಾಪ್ಟನ್ ಮೋದಿ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.ವಿದೇಶಿಗರು ಪ್ರಧಾನಿ ಮೋದಿ ಕುರಿತು ಆಡಿದ ಮಾತುಗಳನ್ನು ಮೋದಿಗೆ ಹೇಳಿದ್ದಾರೆ. ಈ ಮಾತು ಕೇಳಿ ಪ್ರಧಾನಿ ಮೋದಿ ನಕ್ಕು ನೀರಾಗಿದ್ದಾರೆ.