Oct 5, 2022, 12:11 PM IST
18 ಮಹಡಿ. 30 ವಿಮಾನ ಲ್ಯಾಂಡಿಂಗ್..! ಬಲಭೀಮ ವಿಕ್ರಾಂತ್ ಆರ್ಭಟ..! ಭಾರತೀಯ ಸೇನೆಗೆ ‘ರುದ್ರ’ ಬಲ..! ಶತ್ರುಗಳ ಸದ್ದಡಗಿಸದ ಭಯಾನಕ ಮಿಸೈಲ್..! 47 ಪಿಸ್ತೂಲ್ ಗುಂಡು.. 9 ಮಿಲಿ ಮೀಟರ್ ಗಾತ್ರ.. ಎಲ್ಲವನ್ನೂ ತಡೆಯುತ್ತೆ ಜಾಕೇಟ್..! ಇದೇ ಈ ಕ್ಷಣದ ಸ್ಪೆಷಲ್ ಬ್ರಹ್ಮಾಸ್ತ್ರ ಪೂಜೆ..! ನವರಾತ್ರಿಯ ಒಂಭತ್ತನೇ ದಿನವನ್ನು ಕರ್ನಾಟಕದಲ್ಲಿ ಆಯುಧ ಪೂಜೆ ಹಬ್ಬವಾಗಿ ಆಚರಿಸಲಾಗುವುದು. ಈ ದಿನ ವಿವಿಧ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳು, ಉಪಕರಣಗಳು ಮತ್ತು ವಾಹನಗಳನ್ನು ಪೂಜಿಸುವ ಮೂಲಕ ಆಚರಿಸಲಾಗುತ್ತದೆ. ಅದೇ ತರ ಈ ವರ್ಷ ಭಾರತೀಯ ಸೇನೆಯಲ್ಲೂ ಈ ವರ್ಷ ಬ್ರಹ್ಮಾಸ್ತ್ರಗಳು ಸಿಕ್ಕಿವೆ. ದುರ್ಗೆಯ ಆಶೀರ್ವಾದದಿಂದ ಸೇನೆಗೆ ಮತ್ತಷ್ಟು ಶಕ್ತಿ ಬಂದಿದೆ. ಹಾಗಾದ್ರೆ ಈ ವರ್ಷ ಭಾರತೀಯ ಸೇನೆಗೆ ಬಲಿಷ್ಟ ತುಂಬಿದ ಶಸ್ತ್ರಾಸ್ತ್ರಗಳು ಯಾವುವು.
ನಮ್ಮ ದೇಶದ ಹೆಮ್ಮೆಯ ಸೈನಿಕರು, ಹಗಲು ರಾತ್ರಿ ಎನ್ನದೇ, ಮಳೆ ಬಿಸಲಿಗೂ ಜಗ್ಗದೇ, ಹಿಮಪಾತ ಬೆಂಕಿ ಮಳೆಗೂ ಹಿಂದೆ ಸರಿಯದೇ ದೇಶಕ್ಕಾಗಿ ದುಡಿಯುವ ಹೆಬ್ಬುಲಿಗಳಿಗೆ ನಮ್ಮದೊಂದು ದೊಡ್ಡ ಸೆಲ್ಯೂಟ್. ಆದ್ರೆ ಇದೇ ನಮ್ಮ ಇಂಡಿಯನ್ ಆರ್ಮಿಗೆ ಈ ವರ್ಷ ಅನೇಕ ಬಲಿಷ್ಠ ಅಸ್ತ್ರಗಳು ಸೇರ್ಪಡೆಯಾಗಿವೆ. ಅದೆಷ್ಟೋ ಕ್ಷಿಪಣಿಗಳಿಂದ ಭಾರತೀಯ ಸೇನೆಗೆ ನೂರಾನೆ ಬಲ ಬಂದಿದೆ. ಹಾಗಾದ್ರೆ ಈ ವರ್ಷ ಭಾರತೀಯ ಸೇನೆಗೆ ಸೇರಿಕೊಂಡ ಶಸ್ತ್ರಾಸ್ತ್ರಗಳು ಯಾವವು, ಅವುಗಳ ಶಕ್ತಿ ಎಷ್ಟು ಅನ್ನೋದರ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಆಗಸದಿಂದಲೇ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಹಾಗೂ ಸುಮಾರು 700 ಕೆ.ಜಿಯಷ್ಟು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಮತ್ತು ಪ್ರತಿಕೂಲ ವಾತಾವರಣದಲ್ಲೂ ಬಹುವಿಧದ ಪಾತ್ರ ನಿರ್ವಹಿಸಬಲ್ಲ ಕಾಪ್ಟರ್ ಇದಾಗಿದ್ದು, ಇದರ ಸೇರ್ಪಡೆಯಿಂದ ಸೇನೆಗೆ ಆನೆಬಲ ಬಂದಂತಾಗಿದೆ.
ದೇಶೀಯವಾಗಿ ಸೇನೆಯನ್ನು ಆಧುನೀಕರಣಗೊಳಿಸಬೇಕೆಂಬ ಪ್ರಧಾನಿ ಮೋದಿ ಸರಕಾರದ ಸಂಕಲ್ಪದ ಫಲ ಇದಾಗಿದೆ. ಅಪಾಚೆ ಎಎಚ್-6ಇ ನಂತಹ ವಿಶ್ವದ ಅತ್ಯುತ್ತಮ ಹೆಲಿಕಾಪ್ಟರ್‌ಗಳ ಗುಣಮಟ್ಟಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲ ಎಚ್‌ಎಎಲ್ ನಿರ್ಮಿತ ಈ ಲಘು ಯುದ್ಧ ವಿಮಾನಗಳಿಗೆ ಸರಕಾರ 'ಪ್ರಚಂಡ' ಎಂದು ನಾಮಕರಣ ಮಾಡಿದೆ. ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಹೇಳಿ ಮಾಡಿಸಿದಂತಿರುವ ಇವುಗಳನ್ನು ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶ, ಕಾರ್ಗಿಲ್ ಗುಡ್ಡಗಾಡು ಪ್ರದೇಶ, ಹಿಮಾಲಯ ಪರ್ವತ ಶ್ರೇಣಿ, ವಾಸ್ತವ ನಿಯಂತ್ರಣ ರೇಖೆಯ ಗುಡ್ಡಗಾಡು ಪ್ರದೇಶಗಳಲ್ಲಿ ನಿಯೋಜಿಸಲು ಸಹಕಾರಿಯಾಗಿವೆ.