ಲಿಂಗಾನುಪಾತ ಸೂಚ್ಯಂಕ: 112ನೇ ಸ್ಥಾನಕ್ಕೆ ಕುಸಿದ ಭಾರತ!

Dec 26, 2019, 11:09 AM IST

ಲಿಂಗಾನುಪಾತ ಸೂಚ್ಯಂಕದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ 112ನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಐಸ್ಲ್ಯಾಂಡ್ ಜಗತ್ತಿನ ಲಿಂಗ-ತಟಸ್ಥ ದೇಶವೆಂಬ ಅಗ್ರ ಸ್ಥಾನವನ್ನು ಈ ಬಾರಿಯೂ ಕಾಯ್ದುಕೊಂಡಿದ್ದರೆ, ಇತ್ತ 108ನೇ ಸ್ಥಾನದಲ್ಲಿದ್ದ ಭಾರತ 112ನೇ ಸ್ಥಾನಕ್ಕೆ ಕುಸಿದಿದೆ.

ವಿಶ್ವ ಆರ್ಥಿಕ ವೇದಿಕೆಯ ಲಿಂಗಾನುಪಾತ ವರದಿಯನ್ವಯ ಚೀನಾ 106, ಶ್ರೀಲಂಕಾ 102, ನೇಪಾಳ 101, ಬ್ರೆಜಿಲ್ 92, ಇಂಡೋನೇಷ್ಯಾ 85 ಹಾಗೂ ಬಾಂಗ್ಲಾದೇಶ 50ನೇ ಸ್ಥಾನದಲ್ಲಿವೆ. ವಿಶ್ವ ಆರ್ಥಿಕ ವೇದಿಕೆ ಬಿಡುಗಡೆಗೊಳಿಸಿದ ಈ ಲಿಂಗಾನುಪಾತ ಸೂಚ್ಯಂಕದಲ್ಲಿ ಯಮನ್ 153, ಇರಾಕ್ 152 ಹಾಗೂ ಪಾಕಿಸ್ತಾನ 151ನೇ ಸ್ಥಾನದಲ್ಲಿದ್ದು, ಅತ್ಯಂತ ಕೆಳ ಹಂತದಲ್ಲಿವೆ. ರಾಜಕೀಯ ಕ್ಷೇತ್ರದಲ್ಲಿ ಗಮನಿಸುವುದಾದರೆ ಶೇ.25.2ರಷ್ಟು ಮಹಿಳೆಯರು ಸಂಸತ್ತಿನ ಕೆಳಮನೆಯಲ್ಲಿದ್ದರೆ, ಶೇ. 21.2ರಷ್ಟು ಮಹಿಳೆಯರು ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಕಳೆದ ಬಾರಿ ತಲಾ ಶೇ. 24.1 ಹಾಗೂ ಶೇ. 19 ದಷ್ಟು ಮಹಿಳೆಯರಷ್ಟೇ ಈ ಸ್ಥಾನದಲ್ಲಿದ್ದರು. ವಿಶ್ವ ಆರ್ಥಿಕ ವೇದಿಕೆಯು 2006ರಲದ್ಲಿ ಮೊದಲ ಬಾರಿ ಲಿಂಗಾನುಪಾತ ವರದಿಯನ್ನು ಬಿಡುಗಡೆಗೊಳಿಸಿತ್ತು. ಅಂದು ಭಾರತ 98ನೇ ಸ್ಥಾನದಲ್ಲಿತ್ತು. ಇನ್ನು ಆರ್ಥಿಕ ಕ್ಷೇತ್ರದಲ್ಲೂ ಮಹಿಳೆಯರು ಹಿಂದುಳಿದಿದ್ದಾರೆ. ಶೇ. 35.4 ರಷ್ಟು ಮಹಿಳೆಯರು ಮಾತ್ರ ಆರ್ಥಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶೇ. 32.7 ರಷ್ಟು ಮಹಿಳೆಯರನ್ನು ಆರ್ಥಿಕ ಕ್ಷೇತ್ರದಲ್ಲಿ ಹೊಂದಿರುವ ಪಾಕಿಸ್ತಾನ ಭಾರತಕ್ಕಿಂತ ಹಿಂದಿದೆ.