ಕೋವಿಡ್ ವ್ಯಾಕ್ಸಿನ್ ಸಂಶೋಧನಾ ಕೆಲಸ ಪ್ರಗತಿಯಲ್ಲಿದ್ದು, ಲಸಿಕೆ ಸಂಗ್ರಹಕ್ಕೆ ದೇಶದಲ್ಲಿ, ರಾಜ್ಯದಲ್ಲಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರು (ನ. 25): ಕೋವಿಡ್ ವ್ಯಾಕ್ಸಿನ್ ಸಂಶೋಧನಾ ಕೆಲಸ ಪ್ರಗತಿಯಲ್ಲಿದ್ದು, ಲಸಿಕೆ ಸಂಗ್ರಹಕ್ಕೆ ದೇಶದಲ್ಲಿ, ರಾಜ್ಯದಲ್ಲಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಲಸಿಕೆ ಹಂಚಿಕೆ ಬಗ್ಗೆ ಪ್ರಧಾನಿ ಮೋದಿ, 8 ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ವ್ಯಾಕ್ಸಿನ್ ಸಿಗಲಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಇದು ತಲುಪಲಿದೆ ಎಂದು ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಏಕಕಾಲಕ್ಕೆ ಬರೋಬ್ಬರಿ 23 ಲಕ್ಷ ಕೋವಿಡ್ ವ್ಯಾಕ್ಸಿನ್ ಸಂಗ್ರಹಕ್ಕೆ ವ್ಯವಸ್ಥೆ ಇದ್ದು, ಮೊದಲ ಹಂತದಲ್ಲಿ 95 ಸಾವಿರ ಕೋವಿಡ್ ವಾರಿಯರ್ಸ್‌ಗೆ ವ್ಯಾಕ್ಸಿನ್ ಹಾಕಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ಇನ್ನುಳಿದಂತೆ ಯಾವ ರೀತಿ ವ್ಯವಸ್ಥೆ ಮಾಡಲಾಗಿದೆ? ನೋಡೋಣ ಬನ್ನಿ..!